ಬದಿಯಡ್ಕ: ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿಯನ್ನು ಅವಗಣಿಸಿರುವುದನ್ನು ಪಕ್ಷದ ಬದಿಯಡ್ಕ ಮಂಡಲ ಸಮಿತಿ ತೀವ್ರವಾಗಿ ಖಂಡಿಸಿದೆ.
ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಲೀ ಇತರ ಪ್ರತಿನಿಧಿಗಳನ್ನಾಗಲೀ ಕಾರ್ಯಕ್ರಮಕ್ಕೆ ಆಮಂತ್ರಿಸಿಲ್ಲ. ಜಿಲ್ಲಾ ಪಂಚಾಯತಿ ಸದಸ್ಯರನ್ನು ಸಹ ಕಾರ್ಯಕ್ರಮದಿಂದ ದೂರವಿಡಲಾಗಿತ್ತು. ಇದು ಖಂಡನೀಯ ಎಂದು ಪಕ್ಷದ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಹೇಳಿದ್ದಾರೆ. ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಿರುವುದು ಕೇಂದ್ರ ಸರ್ಕಾರದ ಕೊಡುಗೆಯಾಗಿದೆ. ಉಕ್ಕಿನಡ್ಕ ಮೆಡಿಕಲ್ ಕಾಲೇಜಿಗಾಗಿ ಬಿಜೆಪಿ, ಯುವಮೋರ್ಚಾ ಹಲವು ಸಲ ಹೋರಾಟ ನಡೆಸಿದೆ. ಇದಾಗಿಯೂ ಮೆಡಿಕಲ್ ಕಾಲೇಜಿನಲ್ಲಿ ನಡೆದ ಪ್ರಮುಖ ಕಾರ್ಯಕ್ರಮವೊಂದರಿಂದ ಬಿಜೆಪಿಯನ್ನು ದೂರವಿರಿಸಿರುವುದು ರಾಜ್ಯ ಸರ್ಕಾರದ ಅಹಿಷ್ಣುತೆಯನ್ನು ಬಿಂಬಿಸುತ್ತಿದೆ ಎಂದವರು ಹೇಳಿದರು. ಇದೇ ರೀತಿ ಮುಂದುವರಿದಲ್ಲಿ ಹೋರಾಟ ನಡೆಸಬೇಕಾದೀತು ಎಂದವರು ಎಚ್ಚರಿಕೆ ನೀಡಿದ್ದಾರೆ.




-%20Gopalakrishna%20Mundolumoole.jpg)
