ಕಾಸರಗೋಡು: ಎನ್‍ಜಿಓ ಸಂಘದ ಮಾಜಿ ಜಿಲ್ಲಾಧ್ಯಕ್ಷ, ಭಾರತೀಯ ರಾಜ್ಯ ಪಿಂಚಣಿದಾರರ ಮಹಾ ಸಂಘದ ಜಿಲ್ಲಾ ಕೋಶಾಧಿಕಾರಿ ಮತ್ತು ರಾಜಕೀಯ ಕಾರ್ಯಕರ್ತರ ಸಮಿತಿಯ ನಿರ್ದೇಶಕರಾದ ಕೆ. ಕುಞÂಕಣ್ಣನ್ ಮೊದಲ ಸಂಸ್ಮರಣಾ ಕಾರ್ಯಕ್ರಮ ಕಾಸರಗೋಡು ಕರಂದಕ್ಕಾಡಿನ ಕರ್ಮಚಾರಿ ಸಮಿತಿ ಕಚೇರಿಯಲ್ಲಿ ಜರುಗಿತು. ಪುಣ್ಯತಿಥಿ ಅಂಗವಾಗಿ ಕುಞÂಕಣ್ಣನ್ ಅವರ ಛಾಯಾಚಿತ್ರ ಅನಾವರಣ, ಪುಷ್ಪ ನಮನ ಮತ್ತು ಸಂಸ್ಮರಣಾ ಕಾರ್ಯಕ್ರಮ ಜರುಗಿತು.
ಬಿಆರ್‍ಪಿಎಂಎಸ್ ರಾಷ್ಟ್ರೀಯ ಅಧ್ಯಕ್ಷ ಸಿ.ಎಚ್. ಸುರೇಶ್ ಅವರು ಛಾಯಾಚಿತ್ರ ಅನಾವರಣಗೊಳಿಸಿ, ಪುಷ್ಪ ನಮನ ಸಲ್ಲಿಸಿದರು. ನಂತರ ಸಂಸ್ಮರಣಾ ಉಪನ್ಯಾಸ ನಡೆಸಿಕೊಟ್ಟರು. ಬಿಆರ್‍ಪಿಎಂ.ಎಸ್. ಕಾಸರಗೋಡು ಘಟಕ ರಕ್ಷಾಧಿಕಾರಿ ಎಂ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಧೀವರ ಸಭಾ ಜಿಲ್ಲಾಧ್ಯಕ್ಷ ಕೆ. ಸುರೇಶ್ ಕುಮಾರ್, ಜಿಲ್ಲಾ ರಕ್ಷಾಧಿಕಾರಿ ಕೊಂಡೋಟ್ಟಿ ಮಾಧವನ್
ಜಿಲ್ಲಾ ಧರ್ಮಾಚಾರ್ಯ ಸಂಪರ್ಕ ವ್ಯಕ್ತಿ ಎ.ಟಿ. ನಾಯಕ್, ಹಿಂದೂ ಐಕ್ಯ ವೇದಿಕೆ ಜಿಲ್ಲಾ ಪೆÇೀಷಕ ಕೊಟ್ಟೋಡಿ ಗೋವಿಂದನ್ ಮಾಸ್ಟರ್, ಕೆ.ಗೋಪಾಲಕೃಷ್ಣನ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಬಿಆರ್‍ಪಿಎಂಎಸ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಕೆ. ದಯಾನಂದ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಶ್ರೀಕಂಠನ್ ವಂದಿಸಿದರು.

