ಕೊಚ್ಚಿ: ಅರ್ಜೆಂಟೀನಾ ಫುಟ್ಬಾಲ್ ತಂಡ ಮತ್ತು ನಾಯಕ ಲಿಯೋನೆಲ್ ಮೆಸ್ಸಿ ನವೆಂಬರ್‍ನಲ್ಲಿ ಕೇರಳಕ್ಕೆ ಆಗಮಿಸುತ್ತಿಲ್ಲ ಎಂದು ಪ್ರಾಯೋಜಕರು ದೃಢಪಡಿಸಿದ್ದಾರೆ.
ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ ಅಂಗೋಲಾದಲ್ಲಿ ಮಾತ್ರ ಆಡುವುದಾಗಿ ಘೋಷಿಸಿದ ನಂತರ ಈ ದೃಢೀಕರಣ ಬಂದಿದೆ.
ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಪುರುಷರ ಫುಟ್ಬಾಲ್ ತಂಡವು ಮುಂದಿನ ತಿಂಗಳು ಕೊಚ್ಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತರರಾಷ್ಟ್ರೀಯ ಸ್ನೇಹಿ ಪಂದ್ಯಕ್ಕಾಗಿ ಕೇರಳಕ್ಕೆ ಬರಲಿದೆ ಎಂದು ಪ್ರಕಟಣೆಯಾಗಿತ್ತು. ಆದಾಗ್ಯೂ, ನವೆಂಬರ್‍ನಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಮುಂದೂಡಲಾಗಿದೆ. ಪ್ರಾಯೋಜಕ ಆಂಟೊ ಅಗಸ್ಟೀನ್ ಫೇಸ್‍ಬುಕ್ ಪೋಸ್ಟ್‍ನಲ್ಲಿ ಪಂದ್ಯವನ್ನು ಯಾವಾಗ ಆಡಲಾಗುತ್ತದೆ ಎಂಬುದರ ಕುರಿತು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಘೋಷಿಸಿದರು. “ಫಿಫಾ ಅನುಮೋದನೆ ಪಡೆಯುವಲ್ಲಿ ವಿಳಂಬವನ್ನು ಪರಿಗಣಿಸಿ, ನವೆಂಬರ್ ವಿಂಡೋದಲ್ಲಿ ಪಂದ್ಯವನ್ನು ಮುಂದೂಡಲು ಎಎಫ್‍ಎ ಜೊತೆ ಚರ್ಚೆಯಲ್ಲಿ ಒಪ್ಪಂದಕ್ಕೆ ಬರಲಾಗಿದೆ. ಮುಂದಿನ ವಿಂಡೋದಲ್ಲಿ ಕೇರಳದಲ್ಲಿ ಆಡಲಾಗುತ್ತಿದೆ. ಶೀಘ್ರದಲ್ಲೇ ಪ್ರಕಟಣೆ,” ಎಂದು ಪೋಸ್ಟ್‍ನಲ್ಲಿ ಹೇಳಲಾಗಿದೆ.
ಸ್ಪ್ಯಾನಿಷ್ ಮಾಧ್ಯಮ ಔಟ್‍ಲೆಟ್ ಲಾ ನಾಸಿಯಾನ್‍ನಲ್ಲಿನ ವರದಿಯ ಪ್ರಕಾರ, ಅಜೆರ್ಂಟೀನಾ ಫುಟ್ಬಾಲ್ ಅಸೋಸಿಯೇಷನ್ (ಎಎಫ್‍ಎ) ಅಧಿಕಾರಿಯನ್ನು ಉಲ್ಲೇಖಿಸಿ, ಮೂರು ಬಾರಿ ಫಿಫಾ ವಿಶ್ವಕಪ್ ವಿಜೇತರು ಕೇರಳಕ್ಕೆ ಬರುವುದಿಲ್ಲ, ಏಕೆಂದರೆ ಪಂದ್ಯವನ್ನು ಆಯೋಜಿಸುವ ಅವಶ್ಯಕತೆಗಳು ಲಭ್ಯವಿಲ್ಲ. ಅಂದಿನಿಂದ, ಮೆಸ್ಸಿ ಬರುವುದಿಲ್ಲ ಎಂಬ ಊಹಾಪೆÇೀಹಗಳು ಹರಡಿವೆ.
ಕೊಚ್ಚಿ ಕ್ರೀಡಾಂಗಣದ ನವೀಕರಣಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡಿದ ನಂತರ ಮೆಸ್ಸಿ ಆಗಮಿಸುತ್ತಿಲ್ಲವೆಂಬ ಸೂಚನೆ ಬಂದಿರುವುದು ಹತಾಶೆ ಮೂಡಿಸಿದೆ.

