HEALTH TIPS

ವಿಜ್ಞಾನ ಕೇರಳ ಕಾಸರಗೋಡು ಜಿಲ್ಲಾ ಮಿಷನ್ ಕಚೇರಿ, ಕನ್ವರ್ಜೆನ್ಸ್ ಸಭೆ ಉದ್ಘಾಟನೆ

ಕಾಸರಗೋಡು: ಮಕ್ಕಳಿಗೆ ಉದ್ಯೋಗ ಕೇಂದ್ರಿತ ತರಬೇತಿಯನ್ನು ಖಚಿತಪಡಿಸಿಕೊಳ್ಳುವುದರ ಜತೆಗೆ ಸ್ವಾಶ್ರಯ ಕಾಲೇಜುಗಳು ಮತ್ತು ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಉದ್ಯೋಗವನ್ನು ಹುಡುಕಲು ವಿಶೇಷ ಪರಿಗಣನೆ ನೀಡಲಾಗುವುದು ಎಂದು ವಿಜ್ಞಾನ ಕೇರಳ ಸಲಹೆಗಾರ, ಮಾಜಿ ಹಣಕಾಸು ಸಚಿವ  ಡಾ. ಟಿ.ಎಂ. ಥಾಮಸ್ ಐಸಾಕ್ ತಿಳಿಸಿದ್ದಾರೆ.  

ಅವರು ವಿಜ್ಞಾನ ಕೇರಳಂ ಕಾಸರಗೋಡು ಜಿಲ್ಲಾ ಮಿಷನ್ ಕಚೇರಿ ಮತ್ತು ಕನ್ವರ್ಜೆನ್ಸ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀಯವಾಗಿ ಮಹಿಳೆಯರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವುದರಿಂದ ಸಾಮಾಝಿಕ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದಕ್ಕಾಗಿ ಮಹಿಳೆಯರನ್ನು ಕೇಂದ್ರೀಕರಿಸಿ ವಿಜ್ಞಾನ ಕೇರಳ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು.  ಹಾಸಿಗೆ ಹಿಡಿದ ರೋಗಿಗಳಿಗೆ ಅಗತ್ಯ ನೆರವು ನೀಡಲು ಉಪಶಮನ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಉದ್ಯೋಗ ಒದಗಿಸಲಾಗುವುದು ಎಂದು ಅವರು ಹೇಳಿದರು. 

ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್,  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷ ವಕೀಲೆ ಎಸ್.ಎನ್. ಸರಿತಾ, ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯರಾದ ಡಾ.ಅಶೋಕನ್, ಸಜಿತ್ ಪಾಲೇರಿ, ಸ್ಥಳೀಯಾಡಳಿತ ಇಲಾಖೆಯ ಉಪ ನಿರ್ದೇಶಕ ಆರ್.ಶೈನಿ ಮೊದಲಾದವರು ಉಪಸ್ಥಿತರಿದ್ದರು.  ವಿಜ್ಞಾನ ಕೇರಳಂ ಜಿಲ್ಲಾ ಮಿಷನ್ ಸಂಯೋಜಕ ಕೆ.ವಿ. ರಂಜಿತ್ ಸ್ವಾಗತಿಸಿದರು. ಕುಟುಂಬಶ್ರೀ ಎಡಿಎಂಸಿ ಕೆ.ಎಂ. ಕಿಶೋರ್ ಕುಮಾರ್  ವಂದಿಸಿದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries