HEALTH TIPS

ಸಿಬಿಎಸ್‍ಇ ತೇಜಸ್ವಿನಿ ಸಹೋದಯ ಕಲೋತ್ಸವಕ್ಕೆ ಸಂಭ್ರಮದ ಚಾಲನೆ

ಕಾಸರಗೋಡು: ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳೊಳಗಿನ ಸಿಬಿಎಸ್‍ಇ ಶಾಲೆಗಳ ಕಲಾ ಪ್ರತಿಭೆಗಳು ತಮ್ಮ ಕೌಶಲ್ಯ ಪ್ರದರ್ಶಿಸಲು ಒಂದಾಗಿರುವ ತೇಜಸ್ವಿನಿ ಸಹೋದಯ ಶಾಲಾ

ಕಲೋತ್ಸವ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಗುರುವಾರ ಆರಂಭಗೊಂಡಿತು. 


ಎರಡು ದಿವಸಗಳ ಕಾಲ ನಡೆಯಲಿರುವ ಕಲೋತ್ಸವದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ವಿವಿಧ ಕಲಾ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಚಲನಚಿತ್ರ ನಟ, ರಂಗಕರ್ಮಿ ಕಾಸರಗೋಡು ಚಿನ್ನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಲು ಶ್ರಮಿಸಬೇಕು. ಎಳವೆಯಿಂದಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಉತ್ತಮ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯ ಎಂದು ತಿಳಿಸಿದರು. ತೇಜಸ್ವಿನಿ ಸಹೋದಯ ಕಾಂಪ್ಲೆಕ್ಸ್ ಅಧ್ಯಕ್ಷ ಸಿ. ಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸಹೋದಯ ಕಾಂಪ್ಲೆಕ್ಸ್ ಉಪಾಧ್ಯಕ್ಷ ಎ. ದಿನೇಶ್, ಜತೆ ಕಾರ್ಯದರ್ಶಿ ಪುಷ್ಪಲತಾ, ಕಾರ್ಯಕ್ರಮದ ಸಂಯೋಜಕರಾದ ಕೆ.ಎನ್. ಅಜಯಕುಮಾರ್ ಮತ್ತು ಕಾರ್ಯದರ್ಶಿ ಸೀಮಾ ಆರ್. ಉಪಸ್ಥಿತರಿದ್ದರು. 

ಕಾಸರಗೋಡು ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲರಾದ ಟಿ.ವಿ. ಸುಕುಮಾರನ್ ಸ್ವಾಗತಿಸಿದರು. ತೇಜಸ್ವಿನಿ ಸಹೋದಯದ ಕೋಆಧಿಕಾರಿ ಆರ್. ಪ್ರಕಾಶನ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries