ಕಾಸರಗೋಡು: ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಮಂಗಳವಾರ ಮಾತೃ ಪೂಜೆ ಭಕ್ತಿಭಾವದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳ ನೃತ್ಯ ಪ್ರದರ್ಶನದೊಂದಿಗೆ ಆರಂಭವಾದ ಕಾರ್ಯಕ್ರಮ ಮಾತೃ ಪೂಜೆಗೆ ಮೆರುಗನ್ನು ತಂದಿತು.
ಕಾರ್ಯಕ್ರಮವನ್ನು ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಾತೃಭಕ್ತಿಯ ಮೂಲಕ ಸಂಸ್ಕಾರಗಳು ಮತ್ತು ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತವೆ. ಹೊಸ ತಲೆಮಾರಿಗೆ ಪೋಷಕರು ಮಕ್ಕಳನ್ನು ಹೇಗೆ ಬೆಳೆಸಬೇಕು, ಮಕ್ಕಳನ್ನು ಸತ್ಸಂಗದ ದಾರಿಗೆ ತರುವುದು ಹೇಗೆ ಎಂಬುದರಲ್ಲಿ ಪೋಷಕರ ಪಾತ್ರ ಎಷ್ಟು ಪ್ರಮುಖವಾಗಿದೆ ಎಂದು ಸ್ವಾಮೀಜಿ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ವಿದ್ಯಾರ್ಥಿಗಳು ತಾಯಂದಿರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ ಪಾದಪೂಜೆ ಸಲ್ಲಿಸಿದರು. ತಾಯಂದಿರು ಮಕ್ಕಳನ್ನು ಆಶೀರ್ವದಿಸಿ ಸಿಹಿ ತಿನ್ನಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಬಳಿಕ ವಿದುಷಿ ಉಷಾ ಈಶ್ವರ ಭಟ್ ಇವರ ನೇತೃತ್ವದಲ್ಲಿ ಸಂಗೀತಾರ್ಚನ ಕಾರ್ಯಕ್ರಮ ಜರಗಿತು.




.jpeg)
.jpeg)
