ಕುಂಬಳೆ: ರಾಹುಲ್ ಗಾಂಧಿ ವಿರುದ್ಧ ಕೊಲೆ ಬೆದರಿಕೆ ನೀಡಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕುಂಬಳೆ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಂಗಳವಾರ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಕೀಲ ಶಿವರಾಮ ಆಲುವಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂದರ ಅರಿಕ್ಕಾಡಿ ಪ್ರತಿಭಟನೆ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಶೀರ್ ಅಹ್ಮದ್ ಸಿದ್ದಿಕ್, ರವೀಂದ್ರನಾಥ್ ನಾಯಕ್ ಶೇಣಿ, ನಾರಾಯಣ ಏದಾರ್, ಶಾನಿದ್ ಕಯ್ಯಾಕೂಡ್ಲು, ಪ್ರಧಾನ ಕಾರ್ಯದರ್ಶಿ ನಾಸರ್ ಮೊಗ್ರಾಲ್, ಕಮರುದ್ದೀನ್ ಪಾಡ್ಲಡ್ಕ, ವಿಲ್ಫ್ರೆಡ್ ಡಿ'ಸೋಜಾ, ಸಲೀಂ ಪುತ್ತಿಗೆ, ಡೋಲ್ಫಿ ಡಿ'ಸೋಜಾ, ಬಾಲಕೃಷ್ಣ ಶೆಟ್ಟಿ, ರಮೇಶ್ ಗಾಂಧಿನಗರ, ರಾಮ, ಕೇಶವ ದರ್ಬಾರ್ ಕಟ್ಟೆ, ಮಂಡಲ ಅಧ್ಯಕ್ಷ ರವಿ ಪೂಜಾರಿ, ಬಾಲಕೃಷ್ಣ ಗಾಂಭೀರ್, ಸುಲೈಮಾನ್ ಉಜಾರ್ ಪದವು, ಐಎನ್‍ಟಿಯುಸಿ ನಾಯಕರಾದ ಶಾಜಿ ಪೈವಳಿಕೆ, ಪದ್ಮನಾಭ ಕಿದೂರು, ಸಿರಾಜ್ ಕಣ್ಣೂರು, ಶ್ರೀಧರ್ ರೈ ಕಿದೂರು, ಪಿ.ಕೆ. ಚಂದ್ರಶೇಖರ, ಇಬ್ರಾಹಿಂ ಕುಂಬಳೆ ಮೊದಲಾದವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಶೀರ್ ಅಹ್ಮದ್ ಸಿದ್ದಿಕ್ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ವಂದಿಸಿದರು.




.jpg)
