ಬೀಜಿಂಗ್: ಚೀನಾ ಸೇನೆ (China army) ಆಗಾಗ ಬೇರೆ ಬೇರೆ ದೇಶಗಳ ಜೊತೆಗೆ ಕಿರಿಕ್ ಮಾಡಿಕೊಳ್ಳುವುದು ಮಾಮೂಲು ಆಗಿದೆ. ಅದರಲ್ಲೂ ಅಮೆರಿಕ ಸೇನೆ (US army)ವಿರುದ್ಧವೂ ತನ್ನ ಅಸ್ತ್ರಗಳನ್ನು ಪ್ರಯೋಗ ಮಾಡಲು ಚೀನಾದ ಸೇನೆ ಮುಂದಾಗಿತ್ತು. ಹೀಗಿದ್ದಾಗ ನೇರವಾಗಿ ದಿಢೀರ್ ಆಸ್ಟ್ರೇಲಿಯಾ (Australia) ವಿರುದ್ಧವೇ ರೊಚ್ಚಿಗೆದ್ದಿದೆ ಚೀನಾ ಮಿಲಿಟರಿ, ಅಲ್ಲದೆ ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಆಸ್ಟ್ರೇಲಿಯಾದ ಜೆಟ್ ಗಸ್ತು ತಿರುಗುವಾಗಲೇ ದಿಢೀರ್ ಚೀನಾ ಸೇನೆ ಅಟ್ಯಾಕ್ ಮಾಡಿದೆ ಎಂದು ಆರೋಪ ಮಾಡಲಾಗಿದೆ.
ಆಸ್ಟ್ರೇಲಿಯಾ ಜೆಟ್ ಗಸ್ತು ತಿರುಗುವಾಗ ಚೀನಾ ತನ್ನ ಯುದ್ಧ ವಿಮಾನಗಳ ಮೂಲಕ ದಾಳಿ ಮಾಡಲು ಪ್ರಯತ್ನ ಮಾಡಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆರೋಪಿಸಿದ್ದಾರೆ. ಅಸುರಕ್ಷಿತ & ವೃತ್ತಿಪರವಲ್ಲದ ನಡವಳಿಕೆ ಎಂದು ಚೀನಾ ವಿರುದ್ಧ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಚೀನಾ ಬೇರೆ ರೀತಿ ಹೇಳಿಕೆ ನೀಡಿದ್ದು, ಆಸ್ಟ್ರೇಲಿಯಾ ಜೆಟ್ ಚೀನಾ ವಾಯು ಪ್ರದೇಶಕ್ಕೆ ಅಕ್ರಮವಾಗಿ ನುಸುಳಿದ್ದ ಕಾರಣ ನಾವು ಹೊರ ಹಾಕಿದ್ದೇವೆ ಎಂದಿದೆ. ಹಾಗೇ ಚೀನಾದ ಸಾರ್ವಭೌಮತ್ವ ಉಲ್ಲಂಘನೆ ಆರೋಪವನ್ನು ಇದೀಗ ಆಸ್ಟ್ರೇಲಿಯಾ ತಲೆಗೆ ಕಟ್ಟಲಾಗಿದೆ. ಈ ಮೂಲಕ ಆಸ್ಟ್ರೇಲಿಯಾ ಮತ್ತು ಚೀನಾ ನಡುವೆ ಮತ್ತಷ್ಟು ತಿಕ್ಕಾಟ ಏರ್ಪಟ್ಟಿದೆ.

