ಕುಂಬಳೆ: ಬಿರಿಯಾಣಿಯೊಂದಿಗೆ ಕಚ್ಚಂಬರ್ ನೀಡದ ದ್ವೇಷದಿಂದ ಕ್ಯಾಟರಿಂಗ್ ನೌಕರಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಬ್ಬಾಸ್ ಹಾಗೂ ಮಶೂದ್ ಎಂಬವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇಪ್ಪತ್ತೊಂದರ ಹರೆಯದ ಯುವಕನ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಸೀತಾಂಗೋಳಿಯ ಸಭಾಂಗಣವೊಂದರಲ್ಲಿ ನಡೆದ ಸಮಾರಂಭದಲ್ಲಿ ಕಚ್ಚಂಬಾರ್ ಬಡಿಸದಿರುವುದಕ್ಕೆ ಆರೋಪಿಗಳಿಬ್ಬರೂ ಯುವಕನಿಗೆ ಹಾಗೂ ಈತನ ಸಹಾಯಕಗೆ ಬಲವಾಗಿ ಥಳಿಸಿದ್ದಾರೆ. ತನ್ನ ಶಿಕ್ಷಣಕ್ಕೆ ಹಣಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಯುವಕ ಭಾನುವಾರದಂದು ಸಮಾರಂಭಗಳಲ್ಲಿ ಆಹಾರ ವಿತರಣೆಗೆ ತೆರಳುತ್ತಿದ್ದಾನೆ. ಭಾನುವಾರ ಸೀತಾಂಗೋಳಿಯ ಸಭಾಂಗಣದಲ್ಲಿ ಆಹಾರ ವಿತರಣೆ ಕೊನೇ ಹಂತಕ್ಕೆ ಬರುತ್ತಿದ್ದಂತೆ ಮಧ್ಯಾಹ್ನ 3ರ ವೇಲೆಗೆ ಆಗಮಿಸಿದ ಇಬ್ಬರು ಕಚ್ಚಂಬಾರ್ ವಿಷಯಕ್ಕೆ ಸಂಬಂಧಿಸಿ ಮನಬಂದಂತೆ ಥಳಿಸಿರುವುದಾಗಿ ಗಾಯಾಳು ದೂರಿನಲ್ಲಿ ತಿಳಿಸಿದ್ದಾರೆ.

