ಬದಿಯಡ್ಕ: ಬೇಳ ದರ್ಭೆತ್ತಡ್ಕ ನಿವಾಸಿ, ನಿವೃತ್ತ ಗ್ರಾಮಾಧಿಕಾರಿ ಬಿ. ಕೃಷ್ಣ(77)ಹೃದಯಾಘಾತದಿಂದ ನಿಧನರಾದರು. ಭಾನುವಾರ ರಾತ್ರಿ ಆಹಾರ ಸೇವಿಸಿ ವಿಶ್ರಾಂತಿಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡ ಇವರನ್ನು ತಕ್ಷಣ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಜಿಲ್ಲೆಯ ವಿವಿಧ ಗ್ರಾಮಾಧಿಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು, ನಂತರ ಸಾಮಾಜಿಕ, ಸಾಂಸ್ಕøತಿಕ ರಂಗಗಳಾದ ಅಂಬೇಡ್ಕರ್ ವಿಚಾರವೇದಿಕೆ, ಸಮತಾ ಸಾಹಿತ್ಯ ವೇದಿಕೆ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.





