HEALTH TIPS

ಕೂಲಿ ಕಾರ್ಮಿಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಕುಂಬಳೆ ಶಾಂತಿಪಳ್ಳ ನಿವಾಸಿ ದಿ. ವಿಜಯನ್ ಎಂಬವರ ಪುತ್ರ, ಕೂಲಿ ಕಾರ್ಮಿಕ ವಿನಯ ಕುಮಾರ್(44)ಅವರ ಮೃತದೇಹ ಮನೆ ಸನಿಹದ ಹಳೇ ಮರದ ಕಾರ್ಖಾನೆಯ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಭಾನುವಾರ ರಾತ್ರಿ 10ರಿಂದ ಇವರು ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮನೆಯವರು, ಸ್ನೇಹಿತರು ಹಾಗೂ ಪೊಲೀಸರು ಹುಡುಕಾಟ ನಡೆಸುವ ಮಧ್ಯೆ, ಮನೆಯಿಂದ ಅನತಿ ದೂರದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಹಳೇ ಮರದ ಕಾರ್ಖಾನೆಯ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿಪತ್ತೆಯಾಗಿದ್ದರು. ತಕ್ಷಣ ಕೆಳಗಿಳಿಸಿ ಕುಂಬಳೆಯ ಆಸ್ಪತ್ರೆಗೆ ದಾಖಲಿಸಿರೂ ಪ್ರಯೋಜನವಾಗಿರಲಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries