ನವದೆಹಲಿ: ಬಿಹಾರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಪ್ರಕಟಿಸಲಾಗಿರುವ ಮತದಾರರ ಅಂತಿಮ ಪಟ್ಟಿಯಲ್ಲಿ ಇರುವ ಕಾಗುಣಿತ ದೋಷಗಳು ಮತ್ತು ಇತರ ತಪ್ಪುಗಳನ್ನು ಪರಿಶೀಲಿಸಿ, ಸರಿಪಡಿಸಲು ಚುನಾವಣಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಆಂಧ್ರ | ₹13,430 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಕರ್ನೂಲ್: ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ₹13,430 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ನಗರದ ನಡೆದ ಸಮಾರಂಭದಲ್ಲಿ ಮೋದಿ ಅವರು ಕೈಗಾರಿಕೆ, ವಿದ್ಯುತ್ ಪ್ರಸರಣ, ರಸ್ತೆ, ರೈಲ್ವೆ, ರಕ್ಷಣಾ ಉತ್ಪಾದನೆ, ಪೆಟ್ರೋಲಿಯಂ, ನೈಸರ್ಗಿಕ ಅನಿಲದಂತಹ ಪ್ರಮುಖ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಕರ್ನೂಲ್-III ಪೂಲಿಂಗ್ ಸ್ಟೇಷನ್‌ನಲ್ಲಿ ₹2,880 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವ ಕಾಮಗಾರಿ ಮತ್ತು ಕರ್ನೂಲ್‌ನ ಓರ್ವಕಲ್ ಕೈಗಾರಿಕಾ ಪ್ರದೇಶ ಮತ್ತು ಕಡಪಾದಲ್ಲಿನ ಕೊಪ್ಪರ್ತಿ ಕೈಗಾರಿಕಾ ಪ್ರದೇಶದಲ್ಲಿ ₹4,920 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಮೋದಿ ಅಡಿಪಾಯ ಹಾಕಿದ್ದಾರೆ.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿಮಿಟೆಡ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಯೋಜನೆಗಳು ಪ್ಲಗ್ ಅಂಡ್ ಪ್ಲೇ ಮೂಲಸೌಕರ್ಯ ಮತ್ತು ವಾಕ್ ಟು ವರ್ಕ್ ಪರಿಕಲ್ಪನೆಯನ್ನು ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಗಳು ₹21,000 ಕೋಟಿ ಹೂಡಿಕೆ ಆಕರ್ಷಿಸುವುದರ ಜತೆಗೆ ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ರಾಜ್ಯದ ರಾಯಲಸೀಮಾ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ₹960 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸಬ್ಬಾವರಂನಿಂದ ಶೀಲಾನಗರದವರೆಗಿನ ಆರು ಪಥಗಳ ಹೆದ್ದಾರಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಯೋಜನೆಯು ಬಂದರು ನಗರಿ ವಿಶಾಖಪಟ್ಟಣದಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವುದರ ಜತೆಗೆ ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.
ಪಿಲೇರು-ಕಲೂರು ನಡುವೆ ಚತುಷ್ಪಥ ರಸ್ತೆ, ಕಡಪ-ನೆಲ್ಲೂರು ಗಡಿಯಿಂದ ಸಿ.ಎಸ್. ಪುರಂವರೆಗೆ ರಸ್ತೆ ಅಗಲೀಕರಣ ಮತ್ತು ರಾಷ್ಟ್ರೀಯ ಹೆದ್ದಾರಿ 165ರಲ್ಲಿ ಗುಡಿವಾಡ ಮತ್ತು ನುಜೆಲ್ಲಾ ರೈಲು ನಿಲ್ದಾಣಗಳ ನಡುವಿನ ಚತುಷ್ಪಥ ರೈಲು ಸೇತುವೆಯನ್ನು (ಆರ್‌ಒಬಿ) ಪ್ರಧಾನಿ ಉದ್ಘಾಟಿಸಿದ್ದಾರೆ.
ಇದೇ ವೇಳೆ ಮೋದಿ ಅವರು ₹1,200 ಕೋಟಿ ಮೊತ್ತದ ರೈಲ್ವೆ ಯೋಜನೆಗಳಿಗೂ ಅಡಿಪಾಯ ಹಾಕಿದ್ದಾರೆ.
ಇಂಧನ ವಲಯದಲ್ಲಿ ಗೈಲ್ ಇಂಡಿಯಾ ಲಿಮಿಟೆಡ್‌ನ ಶ್ರೀಕಾಕುಳಂ-ಅಂಗುಲ್ ನೈಸರ್ಗಿಕ ಅನಿಲ ಪೈಪ್‌ಲೈನ್ ಅನ್ನು ಉದ್ಘಾಟಿಸಿದ್ದಾರೆ. ಇದನ್ನು ₹1,730 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಆಂಧ್ರಪ್ರದೇಶದಲ್ಲಿ ಸುಮಾರು 124 ಕಿ.ಮೀ ಮತ್ತು ಒಡಿಶಾದಲ್ಲಿ 298 ಕಿ.ಮೀ. ವಿಸ್ತರಿಸಿದೆ.
ಚಿತ್ತೂರಿನಲ್ಲಿ ₹200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಇಂಡಿಯನ್ ಆಯಿಲ್‌ನ 60 ಟಿಎಂಟಿಪಿಎ (ವಾರ್ಷಿಕಕ್ಕೆ ಸಾವಿರ ಮೆಟ್ರಿಕ್ ಟನ್) ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರವನ್ನು ಮೋದಿ ಉದ್ಘಾಟಿಸಿದ್ದಾರೆ.
ಕೃಷ್ಣ ಜಿಲ್ಲೆಯ ನಿಮ್ಮಲೂರಿನಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವತಿಯಿಂದ ಅಭಿವೃದ್ಧಿಪಡಿಸಲಾದ ₹360 ಕೋಟಿ ವೆಚ್ಚದ ಅಡ್ವಾನ್ಸ್ಡ್ ನೈಟ್ ವಿಷನ್ ಪ್ರಾಡಕ್ಟ್ಸ್ ಕೈಗಾರಿಕೆಯನ್ನು ಅವರು ಲೋಕಾರ್ಪಣೆ ಮಾಡಿದ್ದಾರೆ.

