ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹಪೂರ್ವಕ ಶಿಷ್ಯಹಿತಮ್ ಸುವರ್ಣ ಸವಾರಿಗೆ ಮುಳ್ಳೇರಿಯ ಹವ್ಯಕ ಮಂಡಲದ ಪೆರಡಾಲ ವಲಯದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಗುರುವಾರ ಬೆಳಗ್ಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರ ಮನೆಯಲ್ಲಿ ಸ್ವರ್ಣಪಾದುಕೆಗಳನ್ನು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡು ಪಾದುಕಾ ಪೂಜೆ ಸಲ್ಲಿಸಲಾಯಿತು. ಪೆರಡಾಲ ವಲಯದ ವಿವಿಧ ಮನೆಗಳಲ್ಲಿ ಗುರುಪಾದುಕಾ ಪೂಜೆ ನಡೆಯಿತು. ಮಧ್ಯಾಹ್ನ ಡಾ. ಕೃಷ್ಣಪ್ರಕಾಶ ಪೆರುಮುಖ ಇವರ ಮನೆಯಲ್ಲಿ ಪಾದುಕಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಶ್ರೀಮಠದ ಶಿಷ್ಯಂದಿರು ನೇತೃತ್ವ ವಹಿಸಿದ್ದರು.

.jpg)
