ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷಕ್ಕೆ ಪಿಎಚ್‍ಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಅಕ್ಟೋಬರ್ 26 ರವರೆಗೆ ವಿಸ್ತರಿಸಲಾಗಿದೆ. ಅಬ್ಯರ್ಥಿಗಳು www.cukerala.ac.in ವೆಬ್‍ಸೈಟ್‍ಗೆ ಭೇಟಿ ನೀಡುವ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಇಂಗ್ಲಿಷ್ 11, ಅರ್ಥಶಾಸ್ತ್ರ 6, ಜೀವರಸಾಯನಶಾಸ್ತ್ರ ಮತ್ತು ಅನ್ವಿಕ ಜೀವಶಾಸ್ತ್ರ 18. ಪ್ರಾಣಿಶಾಸ್ತ್ರ 5, ಜೀನೋಮಿಕ್ ಸೈನ್ಸ್ 16, ಭೌತಶಾಸ್ತ್ರ 17, ಕಂಪ್ಯೂಟರ್ ಸೈನ್ಸ್ 13, ಹಿಂದಿ 9, ಗಣಿತ 9, ಸಸ್ಯ ವಿಜ್ಞಾನ 10, ರಸಾಯನಶಾಸ್ತ್ರ 14, ಪರಿಸರ ವಿಜ್ಞಾನ 14, ಅಂತಾರಾಷ್ಟ್ರೀಯ ಸಂಬಂಧಗಳು 4, ಭಾಷಾಶಾಸ್ತ್ರ 12, ಸಮಾಜಕಾರ್ಯ 5, ಶಿಕ್ಷಣ 4, ಕಾನೂನು 2, ಮಲಯಾಳಂ 3, ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ಔಷಧ 15, ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನ 10, ಭೂವಿಜ್ಞಾನ 6, ಯೋಗ ಅಧ್ಯಯನ 4, ನಿರ್ವಹಣಾ ಅಧ್ಯಯನ 7, ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರ 5, ಪ್ರವಾಸೋದ್ಯಮ ಅಧ್ಯಯನ 7, ಮತ್ತು ಕನ್ನಡ 4 ಸೇರಿದಂತೆ ಒಟ್ಟು 230 ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗಾಗಿ, ವೆಬ್‍ಸೈಟ್‍ಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.

