ಕಾಸರಗೋಡು: ಚೆಂಗಳ ಪಂಚಾಯಿತಿಯಲ್ಲಿ ಆಡಲಿತದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ವಿರುದ್ಧ ಸಿಪಿಐ(ಎಂ) ಕಾಸರಗೋಡು ಪ್ರದೇಶ ಸಮಿತಿಯ ಆಶ್ರಯದಲ್ಲಿ ಚೆಂಗಳ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಧರಣಿಯನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸದಸ್ಯೆ ಎಂ. ಸುಮತಿ ಉದ್ಘಾಟಿಸಿದರು. ಪಕ್ಷದ ಪ್ರಾದೇಶಿಕ ಸಮಿತಿ ಸದಸ್ಯೆ ಕೆ. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಟಿ.ಎಂ.ಎ. ಕರೀಂ, ಪಿ.ಶಿವಪ್ರಸಾದ್, ಕೆ.ರವೀಂದ್ರನ್, ಸುಭಾಷ್ ಪಾಡಿ, ವೇಣುಗೋಪಾಲನ್, ಲತೀಫ್ ನಾರಂಬಾಡಿ, ಸವಿತಾ, ಕೆ.ಗಿರೀಶ್ ಧರಣಿಗೆ ನೇತೃತ್ವ ನೀಡಿದ್ದರು. ಸಿಪಿಐಎಂ ಚೆಂಗಳ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಸಿ.ವಿ. ಕೃಷ್ಣನ್ ಸ್ವಾಗತಿಸಿದರು.

