ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ದೇಶದಲ್ಲಿ 91726 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದು, ಇದು ಕಳೆದ ವರ್ಷವಿಡೀ ಮಾರಾಟವಾದ 1.1 ಲಕ್ಷ ವಾಹನಗಳಿಗೆ ಹೋಲಿಸಿದರೆ ಶೇಕಡ 86 ರಷ್ಟಾಗಿದೆ.
ಇದು ಇವಿ ಅಳವಡಿಕೆಯ ಪ್ರಗತಿಯನ್ನು ಬಿಂಬಿಸುತ್ತದೆ. ಇದರೊಂದಿಗೆ ಒಟ್ಟು ಪ್ರಯಾಣಿಕ ವಾಹನಗಳ ಸಂಖ್ಯೆಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಪಾಲು ಶೇಕಡ 5ಕ್ಕೇರಿದೆ. ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಇದು ಶೇಕಡ 2.6ರಷ್ಟಿತ್ತು.
ಕಳೆದ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ 44172 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದರೆ, ಈ ಬಾರಿ ಇದೇ ಅವಧಿಯಲ್ಲಿ 91726 ಕಾರುಗಳು ಮಾರಾಟವಾಗಿ ಶೇಕಡ 108ರಷ್ಟು ಪ್ರಗತಿ ದಾಖಲಾಗಿದೆ ಎಂದು ಅಟೋಮೊಬೈಲ್ ಡೀಲರ್‌ಗಳ ಒಕ್ಕೂಟ ಒದಗಿಸಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಜೆಎಸ್ಡಬ್ಲ್ಯೂ ಎಂಜಿ ಮೋಟಾರ್, ಟಾಟಾ ಮೋಟಾರ್ಸ್, ಬಿಎಂಡಬ್ಲ್ಯು, ಮಹೀಂದ್ರಾ ಅಂಡ್ ಮಹೀಂದ್ರಾದಂಥ ಕಂಪನಿಗಳು ಒಳ್ಳೆಯ ಸಾಧನೆ ಮಾಡಿವೆ. ಜೆಎಸ್ಡಬ್ಲ್ಯು ಎಂಜಿಯ ವಿಂಡ್ಸರ್ ಎಸ್ಯುವಿ ಕೇವಲ ಒಂದೇ ವರ್ಷದಲ್ಲಿ 50 ಸಾವಿರದ ಗಡಿ ದಾಟಿದೆ.
ಕಂಪನಿಯ ಮಾರಾಟ ಶೇಕಡ 80ರಷ್ಟು ಏರಿಕೆ ಕಂಡಿದ್ದು, ದೇಶದ ಒಟ್ಟು ಇವಿ ಸಂಖ್ಯೆಯಲ್ಲಿ ಕಂಪನಿಯ ಪಾಲು ಈ ವರ್ಷದ ಕೊನೆಯ ವೇಳೆಗೆ ಶೇಕಡ 7ಕ್ಕೇರಲಿದೆ ಎಂಬ ವಿಶ್ವಾಸವನ್ನು ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮಹೋತ್ರಾ ವ್ಯಕ್ತಪಡಿಸಿದ್ದಾರೆ.




