ಕಾಸರಗೋಡು: ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೇರಳ ಸರ್ಕಾರ ಅಗತ್ಯ ಕ್ರಿಯಾ ಯೋಜನೆ ಕೈಗೊಳ್ಳುತ್ತಿರುವುದಾಗಿ ರಾಜ್ಯ ಮೃಗಸಂರಕ್ಷಣೆ ಹಾಲು ಅಭಿವೃದ್ಧಿ ಖಾತೆ ಸಚಿವೆ ಜೆ. ಚಿಂಚುರಾಣಿ ತಿಳಿಸಿದ್ದಾರೆ. ಅವರು ಹೈನುಗಾರಿಕೆ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಜಂಟಿ ಆಶ್ರಯದಲ್ಲಿ ಪೆರ್ಲ ಇಡಿಯಡ್ಕ ಕ್ಷೇತ್ರದ ಶ್ರೀ ಅನ್ನಪೂರ್ಣ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಹಾಲು ಉತ್ಪಾದಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೇರಳದ ಹಾಲು ಸಂಸ್ಕರಣಾ ಮತ್ತು ಮಾರ್ಕೆಟಿಂಗ್ ಸಂಸ್ಥೆ'ಮಿಲ್ಮಾ'2023-24ನೇ ಸಾಲಿನಲ್ಲಿ 102ಕೋಟಿ ರೂ. ಲಾಭ ಗಳಿಸಿದ್ದು, ಲಾಭಾಂಶವನ್ನು ಎಲ್ಲಾ ಹೈನುಗಾರರಿಗೆ ವಿತರಿಸಲಾಗುವುದು. ಹೈನುಗಾರರು ಹಾಗೂ ಜಾನುವಾರುಗಳಿಗೆ ಪ್ರತ್ಯೇಕ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದಕ್ಕಾಗಿ 8ಕೋಟಿ ರೂ. ಮೊತ್ತ ಮೀಸಲಿರಿಸಲಾಗಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ವಿಶೇಷ ವಿಮಾ ಯೋಜನೆಯನ್ನೂ ಹಮ್ಮಿಕೊಮಡಿದೆ. ರಾಜ್ಯದಲ್ಲಿ ದನವೊಂದಕ್ಕೆ ಸರಾಸರಿ 10.2ಲೀ. ಇದ್ದ ಹಾಲಿನ ಉತ್ಪಾದನೆ ಪ್ರಸಕ್ತ 10.7ಲೀಗೆ ಏರಿಕೆಯಾಗಿದೆ. ಹೈನುಗಾರಿಕೆ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯದಲ್ಲಿ 70'ಕ್ಷೀರಗ್ರಾಮ'ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಉದುಮ ಶಾಸಕ ಸಿ.ಎಚ್ ಕುಞಂಬು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಸಂಸದ ಕೆ. ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಸಕ ಎನ್.ಎ ನೆಲ್ಲಿಕುನ್ನು, ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ, ಕೇರಳ ಡೇರಿ ಅಭಿವೃದ್ಧಿ ನಿಗಮ ಅಧ್ಯಕ್ಷ ವಿ.ಪಿ. ಉಣ್ಣಿಕೃಷ್ಣನ್, ಕೇರಳ ಫೀಡ್ಸ್ ಅಧ್ಯಕ್ಷ ಕೆ. ಶ್ರೀಕುಮಾರ್, ಮಿಲ್ಮಾ ನಿರ್ದೇಶಕ ಪಿ.ಪಿ. ನಾರಾಯಣನ್, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್, ಮಂಗಲ್ಪಾಡಿ ಗ್ರಾಪಂ ಅಧ್ಯಕ್ಷೆ ಫಾತಿಮತ್ ರಬೀನಾ, ಬಿ.ಎಸ್ ಗಾಂಭೀರ್, ಕಾಸರಗೊಡು ಜಿಪಂ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್, ತ್ರಿಸ್ತರ ಪಂಚಾಯಿತಿ ಪ್ರತಿನಿಧಿಗಳು, ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲೆಯ ವಿವಿಧ ಡೈರಿ ಸಹಕಾರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಹಾಲು ಅಭಿವೃದ್ಧಿ ನಿಗಮ ನಿರ್ದೇಶಕಿ ಶಾಲಿನಿ ಗೋಪಿನಾಥ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಜಿಲ್ಲೆಯಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಹೈನುಗಾರರನ್ನು ಮತ್ತು ಡೇರಿ ಗುಂಪುಗಳನ್ನು ಸನ್ಮಾನಿಸಲಾಯಿತು.
ಸಂಘಟನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ.ಕೆ ಅವರು ಧ್ವಜಾರೋಹಣ ನಡೆಸಿ ಸ್ವಾಗತಿಸಿದರು. ಉಷದೇವಿ ಕೆ. ವಂದಿಸಿದರು. ಡೇರಿ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ತಾಂತ್ರಿಕ ತಜ್ಞರು ವಿಷಯಮಂಡಿಸಿದರು. ಪೆರ್ಲ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಕ್ರಿಯಾ ಯೋಜನೆ-ಜಿಲ್ಲಾ ಹಾಲು ಉತ್ಪಾದಕರ ಸಮಾವೇಶದಲ್ಲಿ ಸಚಿವೆ ಜೆ. ಚಿಂಚುರಾಣಿ ಅಭಿಪ್ರಾಯ