ಕಾಸರಗೋಡು: ಬಂದಡ್ಕ ಮಾಣಿಮೂಲೆ ಕಣ್ಣಾಡಿತೋಡಿನಲ್ಲಿ ಮನೆ ಎದುರು ಕಟ್ಟಿಹಾಕಲಾಗಿದ್ದ ಸಾಕುನಾಯಿಯ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಜೋರಾಗಿ ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಎಚ್ಚೆತ್ತು ಹೊರಬರುತ್ತಿದ್ದಂತೆ ಚಿರತೆ ನಾಯಿ ಮೇಲೆ ದಾಳಿ ನಡೆಸಿ, ಪರಾರಿಯಾಗುತ್ತಿರುವುದನ್ನು ಮನೆಯವರು ಗಮನಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳೂ ಚಿರತೆ ದಾಳಿಯಿಂದ ನಾಯಿಗೆ ಗಾಯವಾಗಿರುವುದನ್ನು ಖಚಿತಪಡಿಸಿದ್ದಾರೆ. ಕರ್ನಾಟಕ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವದಟ್ಟ ಕಾನಿನಿಂದಾವೃತವಾಗಿರುವ ಪ್ರದೇಶ ಇದಾಗಿದ್ದು, ಅರಣ್ಯಾಧಿಕಾರಿಗಳು ಈ ಪ್ರದೇಶದಲ್ಲಿ ಗಸ್ತು ಮುಂದುವರಿಸಿದ್ದಾರೆ.

