ಕಾಸರಗೋಡು: ಕನ್ನಡ ಗ್ರಾಮದ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ-ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಗೋ ಕುಟೀರ ನಿರ್ಮಾಣಕ್ಕಿರುವ ಜಾಗದಲ್ಲಿಗೋ ಸಂಕಲ್ಪ ನಡೆಸಲಾಯಿತು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಗೋ ಕುಟೀರದ ಕಾರ್ಯ ಯೋಜನೆಗಳ ಬಗ್ಗೆ ಮಾಃಇತಿ ನೀಡಿದರು. ಕಾಸರಗೋಡು ನಗರಸಭೆಯ ಕೌನ್ಸಿಲರ್ ಶಾರದಾ ಬಿ.ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ ಎನ್. ವೆಂಕಟ್ರಮಣ ಹೊಳ್ಳ, ಜಯಾನಂದ ಕುಮಾರ್ ಹೊಸದುರ್ಗ, ಕೆ ಗುರುಪ್ರಸಾದ ಕೋಟೆಕಣೆ, ಶ್ರೀಕಾಂತ ಕಾಸರಗೋಡು, ಕೆ. ಮುರಳೀಧರ ಪಾರೆಕಟ್ಟೆ, ಕೆ ನಿರಂಜನ ಕೊರಕ್ಕೋಡು, ಯೋಗೀಶ್ ಕೋಟೆಕಣೆ, ನಾರಾಯಣ ನಾಯ್ಕ್ ಪೆರ್ನೆ, ಕಿಶೋರ್ ಕುಮಾರ್ ಕೆ, ಕುಶಲ ಕುಮಾರ ಕೆ, ರಾಧಾಶಿವರಾಮ, ಸವಿತಾ ಕಿಶೋರ್ ಕುಮಾರ್, ಕೆ ಜಗದೀಶ ಕೂಡ್ಲು, ಶ್ವೇತಾ ಯೋಗೀಶ್ ಕೋಟೆಕಣಿ ಉಪಸ್ಥಿತರಿದ್ದರು.
2025 ನವಂಬರ್ 4ರಂದು ಸಂಜೆ 4ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕನ್ನಡಗ್ರಾಮದಲ್ಲಿ ಕಾಸರಗೋಡು ಗೋ-ಕುಟೀರದ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ.ಶಿವರಾಮ ಕಾಸರಗೋಡು 60 ನೇ ವರ್ಷದ ಜನ್ಮ ದಿನೋತ್ಸವವನ್ನು ಗೋ ಸೇವೆಯ ಮೂಲಕ ಗುರುತಿಸಿಕೊಳ್ಳುವುದಕ್ಕಾಗಿ ಕನ್ನಡ ಗ್ರಾಮದಲ್ಲಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಕಾಸರಗೋಡು ಗೋ-ಕುಟೀರ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.


