ಕಾಸರಗೋಡು: ಚಿನ್ಮಯ ಮಿಷನ್ ಆಯೋಜಿಸಿರುವ ಜಿಲ್ಲಾ ಮಟ್ಟದ ಗೀತಾ ಅಧ್ಯನ ಸ್ಪರ್ಧೆ ಅ. 26 ರಂದು ವಿದ್ಯಾನಗರ ಚಿನ್ಮಯ ವಿದ್ಯಾಲಯದಲ್ಲಿ ನಡೆಯಲಿದೆ. ಶಾಲೆ, ಕಾಲೇಜು ಮತ್ತು ಸಾಮಾನ್ಯ ವಿಭಾಗ ಒಳಗೊಂಡಂತೆ ಸ್ಪರ್ಧೆಯನ್ನು ಎಂಟು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕಾಸರಗೋಡು ಜಿಲ್ಲೆತಮ್ಮ ಶಾಲೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 9ಕ್ಕೆ ನೋಂದಾವಣೆ ಪ್ರಾರಂಭವಾಗಲಿದ್ದ, ಕಾಸರಗೋಡು ಚಿನ್ಮಯ ಮಿಷನ್ ಅಧ್ಯಕ್ಷರು ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸ್ವಾಮಿ ವಿಶ್ವಾನಂದ, ಸ್ವಾಮಿ ತತ್ತ್ವಾನಂದ, ಪ್ರಾಂಶುಪಾಲ ಟಿ.ವಿ. ಸುಕುಮಾರನ್, ಸಿಂಧು ಸಶೀಂದ್ರನ್, ಕೆ. ಬಾಲಚಂದ್ರನ್ ಮತ್ತು ಇತರರು ಮಾತನಾಡಲಿದ್ದಾರೆ. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಜಿಲ್ಲೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು ತ್ರಿಶೂರ್‍ನಲ್ಲಿ ನಡೆಯಲಿರುವ ರಾಜ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

