ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಶ್ರೀ ದೇವರ ಘೋಷಯಾತ್ರೆಯೊಂದಿಗೆ ಸಂಪನ್ನಗೊಂಡಿತು. ವಿಜಯದಶಮಿಯಂದು ರಾತ್ರಿ ಶ್ರೀ ದೇವರ ಘೋಷಯಾತ್ರೆ ಮೂಲಕ ಪೇಟೆ ಸವಾರಿ ನಡೆಯಿತು. ಅಶ್ವತ್ಥ ಕಟ್ಟೆಯ ಮುಂಭಾಗದಲ್ಲಿ ವಿವಿಧ ಹುಲಿ ವೇಷಧಾರಿ ತಂಡಗಳಿಂದ ಹುಲಿಕುಣಿತ, ಕಟ್ಟೆಪೂಜೆ ನಂತರ ಕ್ಷೇತ್ರದಲ್ಲಿ ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂಗಳಪೂಜೆ ನೆರವೇರಿತು.
ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಕ್ಷೇತ್ರ ಸಮಿತಿ ಪ್ರಮುಖರಾದ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ಕೆ.ಎನ್. ರಾಮಕೃಷ್ಣ ಹೊಳ್ಳ, ಶ್ರೀನಿವಾಸ ಹೊಳ್ಳ, ರವಿ ಕೇಸರಿ, ರಘುರಾಜ ಅಡಿಗ, ಎಸ್.ವಿ.ಟಿ. ಫ್ರೆಂಡ್ಸ್‍ನ ಕಾರ್ಯಕರ್ತರಾದ ಕಿಶೋರ್ ಕುಮಾರ್, ವಸಂತ್ ಕೆರೆಮನೆ, ರಾಮಕೃಷ್ಣ ರಾವ್, ಕಾರ್ತಿಕ್ ರಾವ್, ಬಾಲಕೃಷ್ಣ ಪಡ್ರೆ, ಕೆ.ವಿ.ತಿರುಮಲೇಶ್ ಹೊಳ್ಳ, ಕೆ.ವಿ.ಶೇಷಾದ್ರಿ ಹೊಳ್ಳ, ಜಿತಿನ್ ರಾಜ್ ಶೆಟ್ಟಿ, ನಾಮದೇವ ಪೈ, ಸುಬ್ರಹ್ಮಣ್ಯ ಮಲ್ಯ, ರವಿರಾಜ್, ಶಿವರಾಮ (ಕೋಟಿ) ಉಪಸ್ಥಿತರಿದ್ದರು. ಹುಲಿವೇಷ ತಂಡಗಳಿಗೆ ಎಸ್.ವಿ.ಟಿ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು. ಒಟ್ಟು ಎಂಟು ಹುಲಿವೇಷ ತಂಡಗಳು ಹುಲಿಕುಣಿತ ನಡೆಸಿಕೊಟ್ಟಿತ್ತು.


