ಕಾಸರಗೋಡು: ನ್ಯಾಯಾಲಯ ನೌಕರ ಚಲಾಯಿಸಿದ ಕಾರು ಇತರ ಎರಡು ಕಾರು ಹಾಗೂ ಸ್ಕೂಟರ್‍ಗೆ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ವಿದ್ಯಾನಗರ ಜಂಕ್ಷನ್‍ನಲ್ಲಿ ಅಪಘಾತ ಸಂಭವಿಸಿದ್ದು, ಎದುರಿಗಿದ್ದ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಬಾಲಕ ಬಂಬ್ರಾಣಿ ನಿವಾಸಿ ಮಹಮ್ಮದ್ ಅಶ್ರಫ್ ಎಂವರ ಪುತ್ರ ಜಲಾಲ್‍ಸೂಫಿ ಹಾಗೂ ಸ್ಕೂಟರ್ ಸವಾರ ಗಾಯಗೊಂಡಿದ್ದು ಇವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಲಾರಂಭದಲ್ಲಿ ಇನ್ನೋವಾ ವಾಹನಕ್ಕೆ ಡಿಕ್ಕಿಯಾದ ಕಾರು ನಂತರ ಸ್ಕೂಟರ್ ಹಾಗೂ ಇನ್ನೊಂದು ಕಾರಿನ ಹಂಭಾಗಕ್ಕೆ ಡಿಕ್ಕಿಯಾಘಿದೆ. ಅಪಘಾತಕ್ಕೆ ಕಾರಣವಾಗಿರುವ ಕಾರು ಚಲಾಯಿಸುತ್ತಿದ್ದ ನ್ಯಾಯಾಲಯ ಸಿಬ್ಬಂದಿ ಕೋಟ್ಟಾಯಂ ನಿವಾಸಿ ಅನೀಶ್ ಎಂಬವರ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

