ಕಾಸರಗೋಡು: ಮಾದಕ ವಸ್ತುಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಚೆರ್ಕಳ ಬಂಬ್ರಾಣಿನಗರ ನಿವಾಸಿ ಹಾಗೂ ಎರಿಯಪ್ಪಾಡಿಯಲ್ಲಿ ವಾಸಿಸುತ್ತಿರುವ ಜಾಬಿರ್ ಕೆ.ಎಂ ಹಾಗೂ ನೆಲ್ಲಿಕಟ್ಟೆ ನಾರಂಪಾಡಿ ಕೋಟ್ಟೇಜ್ ನಿವಾಸಿ ಮಹಮ್ಮದ್ ಆಸಿಫ್ ಪಿ.ಎ ಎಂಬವರನ್ನು ಎನ್‍ಡಿಪಿಎಸ್ ಕಾಯ್ದೆಯನ್ವಯ ಬಂಧಿಸಲಾಗಿದೆ.
ಜಾಬಿರ್‍ನನ್ನು ವಿದ್ಯಾನಗರ ಹಾಗೂ ಮಹಮ್ಮದ್ ಆಸಿಫ್‍ನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಹಲವು ಮಾದಕ ದ್ರವ್ಯ ಸಾಗಾಟ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿವ ವಿಜಯಭರತ್ ರೆಡ್ಡಿ ಅವರ ನಿರ್ದೇಶ ಪ್ರಕಾರ ಎಎಸ್‍ಪಿ ಡಾ. ನಂದಗೋಪಾಲ್ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ಇನ್ಸ್‍ಪೆಕ್ಟರ್ ಕೆ.ಪಿ ಶೈನ್ ಹಾಗೂ ಬದಿಯಡ್ಕ ಠಾಣೆ ಎಸ್‍ಐ ಅನಿಲ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

