HEALTH TIPS

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾಲಾ ಭೇಟಿಯ ವೇಳೆ ಭದ್ರತಾ ಲೋಪ.. ವಾಹನ ನಿಯಂತ್ರಣ ವಿಧಿಸಲಾಗಿದ್ದ ರಸ್ತೆಗೆ ಬೈಕ್‍ನಲ್ಲಿ ಠಳಾಯಿಸಿದ ಮೂವರು ಯುವಕರು

ಕೊಟ್ಟಾಯಂ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾಲಾ ಭೇಟಿಯ ಸಂದರ್ಭ ಭದ್ರತಾ ಲೋಪ ಉಂಟಾಗಿರುವುದು ವರದಿಯಾಗಿದೆ. 

ವಾಹನ ನಿರ್ಬಂಧ ವಿಧಿಸಲಾಗಿದ್ದ ರಸ್ತೆಗೆ ಮೂವರು ಯುವಕರು ಬೈಕ್‍ನಲ್ಲಿ ನುಗ್ಗಿ ಆತಂಕ ಸೃಷ್ಟಿಸಿದರು. ಯುವಕರು ಪೋಲೀಸರನ್ನು ತಡೆದು ದಾಟಿದರು. ಇದರ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿದೆ. 


ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿಗಳು ಮಾತನಾಡುತ್ತಿದ್ದಾಗ ರಸ್ತೆಯಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿತ್ತು.

ಆದಾಗ್ಯೂ, ವಾಹನ ನಿಯಂತ್ರಣ ವಿಧಿಸಲಾಗಿದ್ದ ರಸ್ತೆಯಲ್ಲಿ ಬೈಕ್‍ನಲ್ಲಿ ಬಂದ ಮೂವರು ವ್ಯಕ್ತಿಗಳು ಕಾನೂನು ಮೀರಿ ವರ್ತಿಸಿದ್ದಾರೆ. ಪೋಲೀಸರನ್ನು ಕಂಡೊಡನೆ ಅವರು ಕಾಲ್ಕಿತ್ತರು. ಬೈಕ್ ಸಲಾಯಿಸುತ್ತಿದ್ದ ವ್ಯಕ್ತಿ ಮಾತ್ರ ಹೆಲ್ಮೆಟ್ ಧರಿಸಿದ್ದರು. ಘಟನೆಯ ಬಗ್ಗೆ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಬೈಕ್ ಮೇಲೆ ನಿಗಾ ಇಡಲಾಗಿದ್ದು, ಯುವಕರನ್ನು ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಪಾಲಾ ಸಿಐ ತಿಳಿಸಿದ್ದಾರೆ.  







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries