ಮಧೂರು: ಮಧೂರು ಗ್ರಾಮ ಪಂಚಾಯಿತಿ ಐದನೇ ವಾರ್ಡ್ ಚೇನಕ್ಕೋಡಿನಲ್ಲಿ ನಿರ್ಮಿಸಿರುವ ಸ್ಮಾರ್ಟ್ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ನೆರವೇರಿಸಿದರು. ಈ ಬಗ್ಗೆ ನಡೆದ ಸಮಾರಂಭದಲ್ಲಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅತಿಥಿಯಾಗಿ ಭಾಗವಹಿಸಿದ್ದರು.
ಯಶೋದಾ ಎಸ್ ನಾಯ್ಕ್, ಉಮೇಶ್ ಗಟ್ಟಿ, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯೆ ಜಮೀಲಾ ಅಹಮ್ಮದ್, ಗ್ರಾಮ ಪಂಚಾಯತ್ ಸದಸ್ಯರು, ಕಾಸರಗೋಡು ಸಿಡಿಪಿಒ ಎಂ.ತಿಲಾ, ಐಸಿಡಿಎಸ್ ಮೇಲ್ವಿಚಾರಕರು ವಹಿಸಿದ್ದರು. ಪಿ.ಸಿ. ಪ್ರಿಯಾ, ಎ.ಇ.ಡಿ.ಅನಂತುರಾಜ್ ಹಾಗೂ ಪಂಚಾಯಿತಿ ಕಾರ್ಯದರ್ಶಿ ನೀತು ಸಜಿಮೋನ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ವಾರ್ಡ್ ಸದಸ್ಯೆ ಸ್ಮಿಜಾ ವಿನೋದ್ ಸ್ವಾಗತಿಸಿದರು.




