HEALTH TIPS

NDAಗೆ 2/3ರಷ್ಟು ಬಹುಮತ ಬಂದರೆ ನ. 14ರಂದು ನೆಹರುಗೆ ಸಲ್ಲುವ ಗೌರವ: ರಾಜನಾಥ ಸಿಂಗ್

ದರ್ಭಾಂಗ್: '243 ಸದಸ್ಯಬಲದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತ ಎಣಿಕೆ ದಿನವಾದ ನ. 14ರಂದು ಎನ್‌ಡಿಎಗೆ ಮೂರನೇ ಎರಡರಷ್ಟು ಬಹುಮತ ದೊರೆತಲ್ಲಿ ಅದುವೇ ಪಂಡಿತ್ ಜವಾಹರಲಾಲ್‌ ನೆಹರು ಅವರ ಜನ್ಮದಿನಕ್ಕೆ ಸಲ್ಲುವ ಸೂಕ್ತ ಗೌರವವಾಗಿದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.

ಪಟ್ನಾ ಜಿಲ್ಲೆಯ ಬರ್ಹ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

'ಬಿಹಾರಕ್ಕೆ ಗೂಂಡಾ ರಾಜ್‌ನ ಅಗತ್ಯವಿಲ್ಲ. ಆರ್‌ಜೆಡಿಯ 'ಜಂಗಲ್‌ ರಾಜ್‌'ನಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸುವಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಶಸ್ವಿಯಾಗಿದ್ದಾರೆ. ಆದರೆ ವಿರೋಧ ಪಕ್ಷಗಳು ಬಾಂಗ್ಲಾದೇಶದ ನುಸುಳುಕೋರರ ಮತಗಳನ್ನು ಪಡೆಯಲು ಹವಣಿಸುತ್ತಿವೆ' ಎಂದು ಆರೋಪಿಸಿದ್ದಾರೆ.

'ಸಾಂವಿಧಾನಿಕ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸಿದರೆ ಪ್ರಜಾಪ್ರಭುತ್ವ ಹೇಗೆ ನಡೆಯುತ್ತದೆ' ಎಂದ ಅವರು, ಚುನಾವಣಾ ಆಯೋಗದ ಮೇಲೆ ದಾಳಿ ಮಾಡಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಆರ್‌ಜೆಡಿಯನ್ನು ಅವರು ಟೀಕಿಸಿದ್ದಾರೆ.

ಸರ್ಕಾರಿ ನೌಕರಿ: ಅವಾಸ್ತವಿಕ ಭರವಸೆ

ಇದಕ್ಕೂ ಮುನ್ನ ದರ್ಭಂಗಾ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ ಸಿಂಗ್, ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಪ್ರತಿಯೊಂದು ಮನೆಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ ಎನ್ನುವುದು 'ಅವಾಸ್ತವಿಕ ಭರವಸೆ' ಎಂದಿದ್ದಾರೆ.

'ನಮ್ಮ ಪ್ರಣಾಳಿಕೆ ಗುರುವಾರ ಬಿಡುಗಡೆಯಾಗಲಿದೆ. ಅದರಲ್ಲಿ ನಮೂದಿಸಿರುವ ಪ್ರತಿಯೊಂದು ಪದವನ್ನೂ ಜಾರಿಗೆ ತರುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಬಿಹಾರದ ಸರ್ವತೋಮುಖ ಅಭಿವೃದ್ಧಿಗೆ ₹15 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ರಾಹುಲ್ ಗಾಂಧಿ ಅಲ್ಲ, ಪ್ರಧಾನಿ ಮೋದಿ' ಎಂದು ರಾಜನಾಥ ಸಿಂಗ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries