ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈ ಬಗ್ಗೆ ನ. 14ರಂದು ಅಧಿಸೂಚನೆ ಹೊರಬೀಳಲಿದೆ. ಅದೇ ದಿನದಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಚುನವಣಾ ದಿನಾಂಕ ಘೋಷಣೆಯಾದಂದಿನಿಂದಲೇ ಚುನಾವಣಾ ನೀತಿಸಂಹಿತೆ ಜಾರಿಗೊಂಡಿದೆ.
ರಾಜ್ಯದ ಒಟ್ಟು 841 ಗ್ರಾಮ ಪಂಚಾಯಿತಿಗಳ 17337 ವಾರ್ಡುಗಳು, 152ಬ್ಲಾಕ್ ಪಂಚಾಯಿತಿಗಳ 2267ವಾರ್ಡುಗಳು, 14ಜಿಲ್ಲಾ ಪಂಚಾಯಿತಿಗಳ 346ಡಿವಿಶನ್‍ಗಳು, 87 ನಗರಸಭೆಗಳಲ್ಲಿ ಮಟ್ಟನ್ನೂರ್ ಹೊರತುಪಡಿಸಿ 86ನಗರಸಭೆಗಳ 3205 ವಾರ್ಡುಗಳು, ಆರು ಮಹಾನಗರಪಾಲಿಕೆಗಳ 421ವಾರ್ಡುಗಳು ಸೇರಿದಂತೆ ಒಟ್ಟು 23576ವಾರ್ಡುಗಳಿಗೆ ಚುನಾವಣೆ ನಡೆಯಲಿದೆ.
ಪ್ರಸಕ್ತ ಸ್ಥಳೀಯಾಡಳಿತ ಸಂಸ್ಥೆಗಳ ಕಾಲಾವಧಿ ಡಿ. 20ಕ್ಕೆ ಪೂರ್ಣಗೊಳ್ಳಲಿದ್ದು, ನಂತರ ಹೊಸ ಆಡಳಿತ ಸಮಿತಿ ಜಾರಿಗೆ ಬರಲಿದೆ. ಮಟ್ಟನ್ನೂರು ನಗರಸಭಾ ಆಡಳಿತದ ಕಾಲಾವಧಿ 2027ರ ಸೆ.10ರಂದು ಕೊನೆಗೊಳ್ಳಲಿರುವುದರಿಂದ ಇಲ್ಲಿ ಚುನಾವಣೆ ಹೊರತುಪಡಿಸಲಾಗಿದೆ.




