ಕೊಚ್ಚಿ: ಮಂಡಲ-ಮಕರ ಬೆಳಕು ಋತುವಿನಲ್ಲಿ ಶಬರಿಮಲೆ ಸನ್ನಿಧಾನದ ಪೋಲೀಸ್ ನಿಯಂತ್ರಕರಾಗಿ ನೇಮಕಗೊಂಡ ಆರ್. ಕೃಷ್ಣಕುಮಾರ್ ಅವರ ಸೇವಾ ವಿವರಗಳನ್ನು ಹಾಜರುಪಡಿಸುವಂತೆ ಶಬರಿಮಲೆ ಮುಖ್ಯ ಪೋಲೀಸ್ ಸಂಯೋಜಕ, ಪ್ರಧಾನ ಕಚೇರಿ ಎಡಿಜಿಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದಲ್ಲದೆ, ಶಬರಿಮಲೆ ಮತ್ತು ಪಂಪಾದಲ್ಲಿನ ಪ್ರಮುಖ ಕಾರ್ಯಾಚರಣೆಗಳಿಗೆ ನಿಯೋಜಿಸಲಾದ ಪೋಲೀಸ್ ಅಧಿಕಾರಿಗಳ ವಿವರಗಳನ್ನು ಸಲ್ಲಿಸಬೇಕು.
ನ್ಯಾಯಮೂರ್ತಿ ವಿ ರಾಜಾ ವಿಜಯರಾಘವನ್ ಮತ್ತು ನ್ಯಾಯಮೂರ್ತಿ ಕೆ ವಿ ಜಯಕುಮಾರ್ ಅವರನ್ನೊಳಗೊಂಡ ದೇವಸ್ವಂ ಪೀಠವು ಶಬರಿಮಲೆ ಮುಖ್ಯ ಪೆÇಲೀಸ್ ಸಂಯೋಜಕ, ಪ್ರಧಾನ ಕಚೇರಿ ಎಡಿಜಿಪಿಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವವರ ಪಟ್ಟಿಯನ್ನು ಹಾಜರುಪಡಿಸುವಂತೆ ನಿರ್ದೇಶಿಸಿದೆ.
ಪೋಲೀಸ್ ನಿಯಂತ್ರಕರ ವರ್ಗಾವಣೆಗೆ ಸಂಬಂಧಿಸಿದಂತೆ ಶಬರಿಮಲೆ ವಿಶೇಷ ಆಯುಕ್ತರ ವರದಿಯ ಮೇರೆಗೆ ಸಲ್ಲಿಸಲಾದ ಸ್ವಯಂ ಪ್ರೇರಿತ ಅರ್ಜಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಆರ್ ಕೃಷ್ಣಕುಮಾರ್ ಕೆಎಪಿ-1 ಬೆಟಾಲಿಯನ್‍ನ ಎಸ್‍ಐ. ಅವರಿಗಿಂತ ಮೊದಲು ಸನ್ನಿಧಾನಂನಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿ 20 ವರ್ಷಗಳ ಕಾಲ ನಿರಂತರವಾಗಿ ಅಲ್ಲಿ ಕೆಲಸ ಮಾಡಿದ್ದರು.
ಇಂತಹ ಪರಿಸ್ಥಿತಿಯು ಪಾರದರ್ಶಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಮುಖ್ಯ ಪೆÇಲೀಸ್ ಸಂಯೋಜಕರನ್ನು ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡಲಾಯಿತು. ಈ ವಿಷಯವನ್ನು 14 ರಂದು ಮತ್ತೆ ಪರಿಗಣಿಸಲಾಗುವುದು.




