HEALTH TIPS

ಕೇರಳ ಕೇಂದ್ರ ವಿಶ್ವವಿದ್ಯಾಲಯದ ಒಂಬತ್ತನೇ ಘಟಿಕೋತ್ಸವ-923 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ 9ನೇ ಘಟಿಕೋತ್ಸವ ಭವ್ಯ ಸಮಾರಂಭ ಕ್ಯಾಂಪಸ್‍ನಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ವೇದಿಕೆಯಲ್ಲಿ ಮಂಗಳವಾರ ನೆರವೇರಿತು.   ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‍ಐಆರ್), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ(ಡಿಎಸ್‍ಐಆರ್) ಮಹಾನಿರ್ದೇಶಕಿ ಡಾ. ಎನ್. ಕಲೈಶೆಲ್ವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವದಲ್ಲಿ ಪದವಿಪ್ರದಾನ ನೆರೇರಿಸಿದರು.

ಪದವಿ ಪ್ರದಾನ ಸಮಾರಂಭದಲ್ಲಿಘಟಿಕೋತ್ಸವ ಭಾಷಣ ಮಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ವಿಶ್ವವಿದ್ಯಾಲಯಗಳ ಗುರಿಯಾಗಬೇಕು. ಸ್ವಾತಂತ್ರ್ಯದ 100ನೇ ವರ್ಷವಾದ 2047 ರ ವೇಳೆಗೆ ನಾವು ಅಭಿವೃದ್ಧಿ ಹೊಂದಿದ ಭಾರತದತ್ತ ಪಯಣ ನಡೆಸಬೇಕಾಗಿದ್ದು, ಇದರತ್ತ ಮೊದಲ ಹೆಜ್ಜೆ ಸ್ವಾವಲಂಬನೆಯಾಗಿದೆ.  ದೇಶದ ಹೆಚ್ಚಿನ ಅಗತ್ಯಗಳನ್ನು ನಮ್ಮದೇ ಆದ ತಂತ್ರಜ್ಞಾನಗಳಿಂದ ಪೂರೈಸಬಹುದು ಎಂಬುದು ನಮ್ಮ ತಂತ್ರಜ್ಞನದ ಆವಿಷ್ಕಾರಗಳಿಂದ ಈಗಾಗಲೇ ಸಾಬೀತಾಗಿದೆ.  ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳು ಈ ಬದಲಾವಣೆಗಳೊಂದಿಗೆ ಮುಂದುವರಿಯಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.

ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್, ಉಪಕುಲಪತಿ ಪೆÇ್ರ.ವಿನ್ಸೆಂಟ್ ಮ್ಯಾಥ್ಯೂ, ಪ್ರಭಾರ ಕುಲಸಚಿವ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ,  ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್, ಶೈಕ್ಷಣಿಕ ಡೀನ್ ಪೆÇ್ರ. ಜೋಸೆಫ್ ಕೊಯಿಪಲ್ಲಿ, ವಿಶ್ವವಿದ್ಯಾಲಯದ ಕೋರ್ಟ್ ಸದಸ್ಯರು, ಕಾರ್ಯಕಾರಿ ಮಂಡಳಿ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು, ಹಣಕಾಸು ಸಮಿತಿ ಸದಸ್ಯರು, ಡೀನ್‍ಗಳು, ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಪೆÇೀಷಕರು, ಶಿಕ್ಷಕರು, ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.

2025 ರಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ 923 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 36ಮಂದಿ ವಿದ್ಯಾರ್ಥಿಗಳಿಗೆ ಪದವಿ, 771ಮಂದಿಗೆ ಸ್ನಾತಕೋತ್ತರ ಪದವಿ, 36ಮಂದಿಗೆ ಪಿಎಚ್‍ಡಿ ಪದವಿ ಮತ್ತು 80ಮಂದಿ ಸ್ನಾತಕೋತ್ತರ ಡಿಪೆÇ್ಲಮಾ ಪದವಿ ಪಡೆದುಕೊಂಡರು.    

ವಿವಿಧ ಅಧ್ಯಯನ ವಿಭಾಗಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಐಶ್ವರ್ಯ ವಿ (ವಾಣಿಜ್ಯ ಮತ್ತುಅಂತಾರಾಷ್ಟ್ರೀಯ ವ್ಯವಹಾರ), ನಮಿತಾ ಲಕ್ಷ್ಮಿ ಪಿ.ವಿ. (ನಿರ್ವಹಣಾ ಅಧ್ಯಯನ), ಅಶ್ವತಿ ಆರ್.ಎಸ್., ಮೀವಲ್ ಜಿನೆಟ್ (ಭಾಷಾಶಾಸ್ತ್ರ), ಮಂಜುಶ್ರೀ ಶಿವಾನಿ (ಗಣಿತ), ಅಖಿಲಾ ಎಸ್. (ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನ) ಗೌರವ ಪಡೆದುಕೊಂಡರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries