ಕಾಸರಗೋಡು: 'ಪೋಕ್ಸೋ' ಪ್ರಕರಣದ ಆರೋಪಿಯೊಬ್ಬನನ್ನು ಒಂಬತ್ತು ವರ್ಷಗಳ ನಂತರ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕಗೆ ಸಲಿಂಗ ಕಿರುಕುಳ ನಡೆಸಿದ ಪ್ರಕರಣದ ಆರೋಪಿ ಕಣ್ಣಾಪುರ ದೇಳಿ ಜಂಕ್ಷನ್ ನಿವಾಸಿ ಎಂ.ಎಂ ಮಹಮ್ಮದ್ ಮುಬಾಶಿರ್ ಬಂಧಿತ.
ಒಂಬತ್ತು ವರ್ಷಗಳ ಹಿಂದೆ ಬಾಲಕಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿರುದ್ಧ ಪ್ರಕರಣ ದಆಖಲಾಗುತ್ತಿದ್ದಂತೆ ಈತ ವಿದೇಶಕ್ಕೆಪರಾರಿಯಾಗಿದ್ದನು. ಈತ ವಿದೇಶದಿಂದ ವಾಪಸಾಘುತ್ತಿದ್ದಂತೆ ಈತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಒಟ್ಟು ಏಳುಮಂದಿ ಆರೋಪಿಗಳಿದ್ದು, ಈ ಹಿಂದೆ ಐವರನ್ನುಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.




