HEALTH TIPS

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆ 2025-ಎ.ಐ ಬಳಸಿದ ನಕಲಿ ಪ್ರಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ-ಜಿಲ್ಲಾಧಿಕಾರಿ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಬಳಸಿದ ನಕಲಿ ಪ್ರಚಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ  ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಬಳಸಿದ ನಕಲಿ ಪ್ರಚಾರಗಳ ವಿರುದ್ಧ ತನಿಖೆಯನ್ನು ತೀವ್ರಗೊಳಿಸಲು ಸೈಬರ್ ಪೆÇಲೀಸರಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು. ಅವರು ಜಿಲ್ಲಾಧಿಕಾರಿಯವರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದ ಮಾಧ್ಯಮ ಸಂಬಂಧಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.    ಜಿಲ್ಲಾ ಲೋ ಆಫೀಸರ್ ಎಸ್ ಎನ್ ಶಶಿಕುಮಾರ್, ಜಿಲ್ಲಾ ಇನ್ಫಾರ್ಮೇಶನ್ ಆಫೀಸರ್ ಎಂ. ಮಧುಸೂದನನ್ ರವರು ಸಭೆಯಲ್ಲಿ  ಭಾಗವಹಿಸಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಬಳಸಿದ ಪ್ರಚಾರಗಳಿಗೆ ಕಟ್ಟುನಿಟ್ಟಾದ ನಿಗಾ ಇಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಆಧುನಿಕ ತಂತ್ರಜ್ಞಾನಗಳ ಮೂಲಕ ನಕಲಿ ಚಿತ್ರಗಳು ಮತ್ತು ಧ್ವನಿ ಸಂದೇಶಗಳು ತಪ್ಪು ಮಾಹಿತಿಗಳನ್ನು ನಿರ್ಮಿಸುವ ಮತ್ತು ಅವುಗಳನ್ನು ಚುನಾವಣಾ ಪ್ರಚಾರಗಳಲ್ಲಿ ಬಳಸುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಚಾರದ ವಿಶ್ವಾಸಾರ್ಹತೆ ಮತ್ತು ಸ್ಪರ್ಧೆಯಲ್ಲಿ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಪರ ಪ್ರಚಾರ ನಡೆಸುವವರು ಈ ವಿಷಯವನ್ನು ನಿಖರವಾಗಿ ಗಮನಿಸಬೇಕು. ಚುನಾವಣಾ ಸಮಯದಲ್ಲಿ ತಂತ್ರಜ್ಞಾನಗಳ ದುರುಪಯೋಗದ ಸಾಧ್ಯತೆ ಹೆಚ್ಚಾಗಿದ್ದು, ಪ್ರಚಾರಕ್ಕಾಗಿ ಬಳಸಲಾಗುವ ಡೀಪ್ ಫೇಕ್ ಮತ್ತು ಸಿಂಥೆಟಿಕ್ ವಿಷಯಗಳು ಸಾರ್ವಜನಿಕ ಅಭಿಪ್ರಾಯವನ್ನು ದಾರಿತಪ್ಪಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲು ಸಾಧ್ಯತೆಯಿದೆ ಎಂದು ಆಯೋಗ ತಿಳಿಸಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗವು ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಐಟಿ ಕಾಯ್ದೆ-2000, ಐಟಿ (ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು 2021, ಭಾರತೀಯ ನ್ಯಾಯ ಸಂಹಿತೆ 2023, ಮತ್ತು ಮಾದರಿ ನೀತಿ ಸಂಹಿತೆಗಳಲ್ಲಿರುವ ಎಲ್ಲಾ ನಿಬಂಧನೆಗಳನ್ನು ಅಂತಹ ವಿಷಯಗಳ ತಯಾರಿಕೆ ಮತ್ತು ಪ್ರಚಾರದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಡೀಪ್ ಫೇಕ್ ವೀಡಿಯೊಗಳು, ಆಡಿಯೊಗಳು, ತಪ್ಪು ಮಾಹಿತಿಗಳು, ಮಹಿಳೆಯರನ್ನು ಅವಮಾನಿಸುವ ವಿಷಯಗಳು, ಮಕ್ಕಳನ್ನು ಪ್ರಚಾರಕ್ಕಾಗಿ ಬಳಸುವುದು, ಪ್ರಾಣಿಗಳ ಮೇಲಿನ ಹಿಂಸೆಯನ್ನು ಪ್ರಚಾರ ಮಾಡುವುದು ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಚಾರಕ್ಕಾಗಿ ಬಳಸುವ ಎ.ಐ., ಅಥವಾ ಡಿಜಿಟಲ್ ಆಗಿ ಬದಲಾಯಿಸಿದ ಎಲ್ಲಾ ವಿಷಯಗಳಲ್ಲೂ 'ಂI ಉeಟಿeಡಿಚಿಣeಜ'/ 'ಆigiಣಚಿಟಟಥಿ ಇಟಿhಚಿಟಿಛಿeಜ'/ 'Sಥಿಟಿಣheಣiಛಿ ಅoಟಿಣeಟಿಣ' ಎಂಬ ಸ್ಪಷ್ಟ ಲೇಬಲ್ ಅಳವಡಿಸುವಂತೆಯೂ ಸೂಚಿಸಲಾಗಿದೆ.

ನಕಲಿ ಖಾತೆಗಳು ಮತ್ತು ಕಾನೂನುಬಾಹಿರ ಮಾಹಿತಿಯನ್ನು ಆಯಾ ವೇದಿಕೆಗಳಿಗೆ ವರದಿ ಮಾಡಬೇಕು. ಎ.ಐ. ಬಳಸಿ ತಯಾರಿಸಿದ ಎಲ್ಲಾ ಪ್ರಚಾರ ಸಾಮಗ್ರಿಗಳು, ರಚಿಸಿದ ದಿನಾಂಕ, ತಯಾರಕರ ಮಾಹಿತಿ ಇತ್ಯಾದಿಗಳನ್ನು ಆಂತರಿಕ ದಾಖಲೆಗಳಾಗಿ ರಾಜಕೀಯ ಪಕ್ಷಗಳು ಇಟ್ಟುಕೊಳ್ಳಬೇಕು ಎಂದು ಆಯೋಗ ಸೂಚಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries