ಬದಿಯಡ್ಕ: ಆರೋಗ್ಯದಾಯಕ ಮನುಷ್ಯನಿಗೆ ಉತ್ತಮ ಆಹಾರದ ಸೇವನೆ ಎಷ್ಟು ಮುಖ್ಯವೋ ದೇಹಕ್ಕೆ ಸರಿಯಾದ ವ್ಯಾಯಮವನ್ನು ನೀಡಬೇಕಾಗಿರುವುದೂ ಅಷ್ಟೇ ಮುಖ್ಯವಾಗಿದೆ. ಸೂರ್ಯನಮಸ್ಕಾರ, ಯೋಗ ಮೊದಲಾದವುಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸಂಘಟನೆಯು ಮಹತ್ತರವಾದ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಹೇಳಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನೇತ್ರಾವತಿ ವಲಯ ದಕ್ಷಿಣ ಕನ್ನಡ ಕಾಸರಗೋಡು ನಗರ ಇವರ ನೇತೃತ್ವದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಸಭಾಂಗಣದಲ್ಲಿ 48 ದಿನಗಳ ಯೋಗ ಶಿಕ್ಷಣ ತರಗತಿಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಬದಿಯಡ್ಕ ಗಣೇಶ ಮಂದಿರ ಶಾಖೆಯ ಶಿಕ್ಷಕಿ ಪುಷ್ಪ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರ ಶಿಕ್ಷಣ ಪ್ರಮುಖ ಶೈಲೇಶ್ ಸಂಘಟನೆ ಕಾರ್ಯಗಳ ಬಗ್ಗೆ ಬೆಳಕನ್ನು ಚೆಲ್ಲಿದರು. ಲೋಕ ಕಲ್ಯಾಣ ಮಂತ್ರದೊಂದಿಗೆ ಸಭಾ ಕಾರ್ಯಕ್ರಮ ಸಂಪನ್ನವಾಯಿತು. ಸಮಿತಿಯ ಪ್ರಮುಖರು, ಯೋಗಬಂಧುಗಳು ಮತ್ತು ಯೋಗಾಸಕ್ತರು ಪಾಲ್ಗೊಂಡಿದ್ದರು.




.jpg)
