ಮಧೂರು: ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿರುವ ಮುಳ್ಳೇರಿಯ ಹವ್ಯಕ ಮಂಡಲಾಂತರ್ಗತ, ಹವ್ಯಕ ವಲಯ, ಕಾಸರಗೋಡು ಇವರ ನೇತೃತ್ವದಲ್ಲಿ ಮನ್ನಿಪ್ಪಾಡಿ ಘಟಕದ ಮಹಾಲಿಂಗೇಶ್ವರ ಭಟ್ ಅವರ ಪ್ರಾಯೋಜಕತ್ವದಲ್ಲಿ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಉಪಯೋಗಕ್ಕೆ ಕಸ ತುಂಬಿಸುವ ಪ್ಲಾಸ್ಟಿಕ್ ಡಬ್ಬಗಳನ್ನು ಕೊಡುಗೆಯಾಗಿ ಸಮರ್ಪಣೆ ಮಾಡಲಾಯಿತು.
ಕ್ಷೇತ್ರದ ಅರ್ಚಕ ಕೃಷ್ಣಮೂರ್ತಿ ಕಲ್ಲೂರಾಯ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ಕಾಸರಗೋಡು ಹವ್ಯಕ ವಲಯದ ಅಧ್ಯಕ್ಷ ಗೋವಿಂದ ಭಟ್ ವೈ.ಕೆ, ಕಾರ್ಯದರ್ಶಿ ಡಿ ಎನ್ ಮಹೇಶ ಮನ್ನಿಪ್ಪಾಡಿ, ಪ್ರಾಯೋಜಕರಾದ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ, ಪ್ರೇಮ್ ಪ್ರಕಾಶ್ ಮನ್ನಿಪ್ಪಾಡಿ, ಬಿ., ಮಹಾಬಲ ಭಟ್, ಉಳುವಾನ ಈಶ್ವರ ಭಟ್, ಡಿ ಜಯನಾರಾಯಣ ತಾಯನ್ನೂರು, ಈಶ್ವರ ಭಟ್ ಕಿಳಿಂಗಾರು, ಶಂಕರನಾರಾಯಣ ಭಟ್ ಅಳಕ್ಕೆ, ಶಾಮ ಮಧ್ಯಸ್ಥ, ಮಧೂರು, ಮುರಳಿ ಮೊಗ್ರಾಲ್, ಸುಬ್ರಹ್ಮಣ್ಯ ಶರ್ಮ ಅಳಕ್ಕೆ, ಕೆ. ಕೃಷ್ಣ ಭಟ್, ಶಿವಶಂಕರ ಭಟ್, ಬಿ. ಎನ್, ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು. ಸಮರ್ಪಿಸಿದ ಡಬ್ಬಗಳನ್ನು ಪ್ರಧಾನ ದೇಗುಲದ ಮುಂಭಾಗದಲ್ಲಿ ಹಾಗೂ ಪರಿಸರದಲ್ಲಿ ಭಗವದ್ಭಕ್ತರ ಅನುಕೂಲಕ್ಕಾಗಿ ಇರಿಸಲಾಗಿದೆ.




.jpg)
