ಜಕಾರ್ತ: ಇಂಡೊನೇಶ್ಯದ ರಾಜಧಾನಿ ಜಕಾರ್ತದಲ್ಲಿ ಶಾಲೆಯೊಂದರ ಸಮೀಪ ನಡೆದ ಭಾರೀ ಸ್ಫೋಟವೊಂದರಲ್ಲಿ ಕನಿಷ್ಠ 54 ಮಂದಿ ಗಾಯಗೊಂಡಿದ್ದಾರೆ. ಆದರೆ ಸ್ಫೋಟಕ್ಕೆ ಕಾರಣವೇನೆಂಬುದನ್ನು ಪೊಲೀಸರು ಈವರೆಗೆ ಬಹಿರಂಗಪಡಿಸಿಲ್ಲ.
ಘಟನೆಯಲ್ಲಿ ಸುಮಾರು 54 ಮಂದಿ ಗಾಯಗೊಂಡಿದ್ದಾರೆಂದು ಎಂದು ತಿಳಿದುಬಂದಿದೆ.
ಗಾಯಾಳುಗಳಲ್ಲಿ ಕೆಲವು ಅಪ್ರಾಪ್ತ ವಯಸ್ಕರಾಗಿದ್ದಾರೆ. ಪ್ರಸಕ್ತ ಅವರೆಲ್ಲರಗೂ ಚಿಕಿಚ್ಸೆ ನೀಡಿದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆಯೆಂದು ಜಕಾರ್ತ ಪೊಲೀಸ್ ವರಿಷ್ಠ ಅಸೆಪ್ ಎಡಿ ಸುಹೇರಿ ಅವರು ತಿಳಿಸಿದ್ದಾರೆ.
ಪೊಲೀಸರು ಸ್ಫೋಟದ ನಡೆದ ಸ್ಥಳವನ್ನು ಸುತ್ತುವರಿದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ತಪಾಸಣಾ ದಳ ಸೇರಿದಂತೆ ಜಕಾರ್ತ ಪೊಲೀಸರ ತಂಡವು ಸ್ಫೋಟದ ಕಾರಣವನ್ನು ತಿಳಿಯಲು ಯತ್ನಿಸುತ್ತಿದ್ದಾರೆ.




