5ಜಿ ಬಳಸುವಾಗಲೂ ಇಂಟರ್ನೆಟ್ ವೇಗ ನಿಧಾನವಿದ್ದರೆ ಪರಿಹಾರವಿದೆ. ಏಕೆಂದರೆ ಕೆಲವೊಮ್ಮೆ ಇಂಟರ್ನೆಟ್ ವೇಗದ ಕೊರತೆಯು ನೆಟ್‍ವರ್ಕ್‍ನ ಸಮಸ್ಯೆಯಲ್ಲ, ಅದು ನಿಮ್ಮ ಪೋನ್‍ನಲ್ಲಿರುವ ಸೆಟ್ಟಿಂಗ್‍ಗಳ ಸಮಸ್ಯೆಯಾಗಿದೆ.
ನೀವು ಈ ಸೆಟ್ಟಿಂಗ್‍ಗಳನ್ನು ಸರಿಹೊಂದಿಸಿದರೆ, ವೀಡಿಯೊ ಬಫರಿಂಗ್ ಮತ್ತು ಪುಟಗಳು ಲೋಡ್ ಆಗದಿರುವ ಸಮಸ್ಯೆಗಳನ್ನು ನೀವು ಪರಿಹರಿಸಬಹುದು. ಸೆಟ್ಟಿಂಗ್‍ಗಳಲ್ಲಿ ನೀವು ಮಾಡುವ ಯಾವುದೇ ಬದಲಾವಣೆಗಳು ಕಡಿಮೆ ಇಂಟರ್ನೆಟ್ ವೇಗದ ದೂರನ್ನು ಪರಿಹರಿಸಬಹುದೇ ಎಂದು ನೋಡೋಣ.
ಪರಿಶೀಲಿಸಬೇಕಾದ ಮೊದಲ ಸೆಟ್ಟಿಂಗ್ ಫೆÇೀನ್‍ನಲ್ಲಿನ ನೆಟ್‍ವರ್ಕ್ ಆದ್ಯತೆಗಳು. ಫೆÇೀನ್ ಸೆಟ್ಟಿಂಗ್‍ಗಳಲ್ಲಿ 'SIಒ ಕಾರ್ಡ್ & ಮೊಬೈಲ್ ನೆಟ್‍ವರ್ಕ್‍ಗಳು' ಆಯ್ಕೆಯನ್ನು ಆರಿಸಿ ಮತ್ತು 'ಆದ್ಯತೆಯ ನೆಟ್‍ವರ್ಕ್ ಪ್ರಕಾರ'ವನ್ನು '5ಜಿ/4ಜಿ/3ಜಿ/2ಜಿ (ಸ್ವಯಂ)' ಗೆ ಹೊಂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಮುಂದಿನ ಹಂತದಲ್ಲಿ ಪರಿಶೀಲಿಸಬೇಕಾದದ್ದು ಡೇಟಾ ಸೇವರ್ ಅಥವಾ 'ಕಡಿಮೆ ಡೇಟಾ ಮೋಡ್' ಆನ್ ಆಗಿದೆಯೇ ಎಂಬುದು. ಈ ಆಯ್ಕೆಯನ್ನು ಆಫ್ ಮಾಡುವುದರಿಂದ ನೆಟ್‍ವರ್ಕ್ ವೇಗ ಹೆಚ್ಚಾಗಬಹುದು. ಇಷ್ಟೆಲ್ಲಾ ಮಾಡಿದರೂ ನೆಟ್‍ವರ್ಕ್ ವೇಗ ಹೆಚ್ಚಾಗದಿದ್ದರೆ, ಮುಂದಿನ ಹಂತವೆಂದರೆ 'ಎಪಿಎನ್' (ಆಕ್ಸೆಸ್ ಪಾಯಿಂಟ್ ಹೆಸರುಗಳು) ಸೆಟ್ಟಿಂಗ್‍ಗಳನ್ನು ಮರುಹೊಂದಿಸುವುದು.
ನಂತರ, ನಿಯಮಿತ ಮರುಪ್ರಾರಂಭ ಮತ್ತು ಫ್ಲೈಟ್ ಮೋಡ್ ಅನ್ನು ಆನ್ ಮತ್ತು ಆಫ್ ಮಾಡುವುದು ಸಹ ಉಪಯುಕ್ತವಾಗಿದೆ. ಇದು ನೆಟ್‍ವರ್ಕ್ ಅನ್ನು ರಿಫ್ರೆಶ್ ಮಾಡಲು ಮತ್ತು ಸಿಗ್ನಲ್ ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ.




