ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?, ಗ್ರೂಪ್ ಚಾಟ್‌ನಿಂದ ವೈಯುಕ್ತಿಕ ಚಾಟ್‍ಗೆ ಯಾವುದೇ ಅಡ್ಡಿಯಾಗಲ್ಲ. ವ್ಯಾಟ್ಸಾಪ್‌ನಲ್ಲಿರುವ ಗ್ರೂಪ್‌ನಂತೆ ಚಾಟ್‌ಜಿಪಿಟಿ ಕೂಡ ಹೊಸ ಫೀಚರ್ ನೀಡುತ್ತಿದೆ.
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಇದೀಗ ಎಲ್ಲೂ ಕ್ಷೇತ್ರದಲ್ಲಿ ಬಳಕ ಮಾತ್ರವಲ್ಲ, ಬಹುತೇಕರು ಅವಲಂಬಿತರಾಗಿದ್ದಾರೆ.
ಇತ್ತ ಎಐ ತಂತ್ರಜ್ಞಾನದಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇದೆ. ಇದೀಗ ಓಪನ್ ಎಐನ ಚಾಟ್‌ಜಿಪಿಟಿ ಹೊಸ ಕ್ರಾಂತಿ ಮಾಡುತ್ತಿದೆ. ಅಸೈನ್ಮೆಂಟ್, ಪ್ರಾಜೆಕ್ಟ್ ಸೇರಿದಂತೆ ಯಾವುದೇ ಕೆಲಸ, ಮಾಹಿತಿ ಬೇಕಿದ್ದರೂ ಇದೀಗ ಬಹುತೇಕರೂ ಎಐ ಇಂಟಿಗ್ರೇಟೆಡ್ ಟೂಲ್ ಬಳಕೆ ಮಾಡುತ್ತಾರೆ. ಈ ಪೈಕಿ ಚಾಟ್‌ಜಿಪಿಟಿ ಬಹುತೇಕರ ಆಯ್ಕೆ. ಇದೀಗ ಚಾಟ್‌ಜಿಪಿಟಿ ಹೊಸ ಗ್ರೂಪ್ ಚಾಟ್ ಫೀಚರ್ ಲಾಂಚ್ ಮಾಡಿದೆ.

ಪ್ರಾಜೆಕ್ಟ್ ಅಥವಾ ಇನ್ಯಾವುದೇ ಕೆಲಸಗಳನ್ನು ಜೊತೆಯಾಗಿ ಮಾಡಲು ಗ್ರೂಪ್ ಚಾಟ್ ನೆರವಾಗಲಿದೆ. ಒಂದೇ ಪ್ರಾಜೆಕ್ಟ್‌ನ್ನು ಬೇರೆ ಬೇರೆ ಜಾಗದಲ್ಲಿದ್ದುಕೊಂಡು ಬೇರೆ ಬೇರ ವ್ಯಕ್ತಿಗಳು ಮಾತುಕತೆ, ಚರ್ಚೆ ನಡೆಸಿ ಮಾಡಲು ಅನುಕೂಲ ಮಾಡಿಕೊಡುತ್ತದೆ. ವ್ಯಾಟ್ಸಾಪ್ ಗ್ರೂಪ್ ರೀತಿಯಲ್ಲೇ ಈ ಚಾಟ್‌ಜಿಪಿಟಿ ಗ್ರೂಪ್ ಚಾಟ್‌ನಲ್ಲಿ ಚರ್ಚೆ, ಸಂದೇಶ ರವಾನಿಸಬಹುದು, ಚಾಟ್ ಮಾಡಬಹುದು.

ಚಾಟ್‌ಜಿಪಿಟಿ ಗ್ರೂಪ್ ಚಾಟ್ ಫೀಚರ್, ಉಚಿತ ಸಬ್‌ಸ್ಕ್ರೈಬರ್ ಹೊಂದಿದವರಿಗೂ ಲಭ್ಯವಿದೆ. ದೇಶ ವಿದೇಶಗಳಲ್ಲಿ ಈ ಸೌಲಭ್ಯ ನೀಡಲಾಗಿದೆ. ಪ್ಲಾನ್ ಮಾಡಲು, ಚರ್ಚಿಸಲು, ಕೆಲಸ ಮಾಡಲು, ಅಸೈನ್ಮೆಂಟ್ ಮಾಡಲು ಸೇರಿದಂತೆ ಗ್ರೂಪ್ ಚಾಟ್‌ಗೆ ಚಾಟ್‌ಜಿಪಿಟಿ ನೆರವು ನೀಡುತ್ತದೆ. ಇದನ್ನು ಬಳಸುವುದು ಹೇಗೆ?

ಬಳಕೆದಾರರು ತಮ್ಮದೇ ಆದ ಗ್ರೂಪ್ ಚಾಟ್ ಕ್ರಿಯೇಟ್ ಮಾಡಬಹುದು. ಯಾವುದೇ ಹೊಸ ಚಾಟ್ ಅಥವಾ ಈಗಾಗಲೇ ಮಾಡಿರುವ ಚಾಟ್ ಬಳಿಕ ಅಥವಾ ಜನರ ಐಕಾನ್ ಇರುವಲ್ಲಿ ಟ್ಯಾಪ್ ಮಾಡಬೇಕು. ಬಳಿಕ ಗರಿಷ್ಠ 20 ಮಂದಿಯನ್ನು ಗ್ರೂಪ್ ಚಾಟ್‌ಗೆ ಇನ್‌ವೈಟ್ ಮಾಡಬಹುದು. ಒಂದು ಬಾರಿ ಇನ್‌ವೈಟ್ ಸೆಂಡ್ ಮಾಡಿದಾಗ ಎಐ ಚಾಟ್‌ಜಿಪಿಟಿ ಗ್ರೂಪ್ ರಚಿಸುತ್ತದೆ.
ಚಾಟ್‌ಜಿಪಿಟಿ ಗ್ರೂಪ್ ಚಾಟ್ ಬಳಸುವುದು ಹೇಗೆ?

ನೀವು ಇನ್‌ವೈಟ್ ಮಾಡಿದವರು ಗ್ರೂಪ್ ಸೇರುತ್ತಿದ್ದಂತೆ ಗ್ರೂಪ್ ಆಯಕ್ಟೀವ್ ಆಗಲಿದೆ. ಚಾಟ್ ಆರಂಭಗೊಳ್ಳಲಿದೆ. ಸಂವಾದಗಳು, ಚರ್ಚೆಗಳು, ಮಾಹಿತಿ ರವಾನೆ ಸೇರಿದಂತೆ ವ್ಯಾಟ್ಸಾಪ್ ಗ್ರೂಪ್ ರೀತಿಯಲ್ಲೇ ಕೆಲಸ ಮಾಡುತ್ತದೆ. ವಿಶೇಷ ಅಂದರೆ ಗ್ರೂಪ್ ಸದಸ್ಯರು ಏನಾದರು ಪ್ರಶ್ನೆ, ಡೌಟ್ ಕೇಳಿದರೆ ನೀವು ಉತ್ತರ ನೀಡಬಹುದು, ಅಥವಾ ಚಾಟ್‌ಜಿಪಿಟಿ ಬಳಿ ಉತ್ತರ ನೀಡಲು ಸೂಚಿಸಬಹುದು. ವಿಶೇಷ ಅಂದರೆ ಚಾಟ್‌ಜಿಪಿಟಿ ಇಮೋಜಿ ಅಥವಾ ಪರ್ಸನಲೈಜ್ ಇಮೋಜಿಗಳ ಪ್ರತಿಕ್ರಿಯೆ ನೀಡುತ್ತದೆ.




