ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುತ್ತಿರುವವರ ನಾಮಪತ್ರಗಳ ಪರಿಶೀಲನೆಯ ನಂತರ, 98451 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2261 ನಾಮಪತ್ರಗಳು ತಿರಸ್ಕøತಗೊಂಡಿವೆ. ತಿರುವನಂತಪುರಂ ಜಿಲ್ಲೆಯಲ್ಲಿ ಮಾತ್ರ 527 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಎರ್ನಾಕುಳಂನಲ್ಲಿ 348 ಮತ್ತು ಕೊಟ್ಟಾಯಂನಲ್ಲಿ 401 ನಾಮಪತ್ರಗಳು ತಿರಸ್ಕೃತಗೊಂಡಿವೆ. ಮಲಪ್ಪುರಂ ಅತಿ ಹೆಚ್ಚು (19,959) ನಾಮಪತ್ರಗಳನ್ನು ಹೊಂದಿತ್ತು. ತ್ರಿಶೂರ್ (17,168) ಮತ್ತು ಎರ್ನಾಕುಲಂ (16,698) ಜಿಲ್ಲೆಗಳು ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ವಯನಾಡ್ ಕಡಿಮೆ (5,227) ನಾಮಪತ್ರಗಳನ್ನು ಹೊಂದಿತ್ತು.
ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯಬಹುದು. ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ಸಮಯದ ನಂತರ, ಚುನಾವಣಾಧಿಕಾರಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸುತ್ತಾರೆ.
ಅಭ್ಯರ್ಥಿಗಳ ಹೆಸರುಗಳನ್ನು ಮಲಯಾಳಂ ವರ್ಣಮಾಲೆಯ ಕ್ರಮದಲ್ಲಿ ಪಟ್ಟಿ ಮಾಡಲಾಗುತ್ತದೆ. ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ವಿಳಾಸ ಮತ್ತು ನಿಗದಿಪಡಿಸಿದ ಚಿಹ್ನೆ ಇರುತ್ತದೆ.




