ಕಾಸರಗೋಡು: ಜಿಲ್ಲಾ ಪೆÇಲೀಸ್ ಸಹಕಾರಿ ಸಂಘದ 2024-2025ನೇ ಸಾಲಿನ ವಾರ್ಷಿಕ ಮಹಾಸಭೆ ಕಾಸರಗೋಡು ಡಿಎಚ್‍ಕ್ಯೂ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಅಪರಾಧ ವಿಭಾಗದ ಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ಸಮಾರಂಭ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಟಿ. ಗಿರೀಶ್ ಬಾಬು ಅದ್ಯಕ್ಷತೆ ವಹಿಸಿದ್ದರು. ಕಾಸರಗೋಡು ಎಎಸ್ಪಿ ಡಾ. ನಂದಗೋಪನ್ ಐಪಿಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ 2024-25ನೇ ಸಾಲಿನಲ್ಲಿ ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ನಗದುಪುರಸ್ಕಾರ ಮತ್ತು ಸಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೆÇಲೀಸ್ ಪದಕ ವಿಜೇತ ಅಪರಾಧ ವಿಭಾಗದ ಎಸ್ಪಿ ಪಿ.ಬಾಲಕೃಷ್ಣನ್, ಎಸ್‍ಎಂಎಸ್ ಡಿವೈಎಸ್‍ಪಿ ಸಿ.ಕೆ. ಸುನಿಲ್‍ಕುಮಾರ್ ಮತ್ತು ಮುಖ್ಯಮಂತ್ರಿಗಳ ಪೆÇಲೀಸ್ ಪದಕ ಪಡೆದ ಸಿಬ್ಬಂದಿಯನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಪ್ರಶಸ್ತಿ ವಿತರಿಸಲಾಯಿತು.
ಕೆಪಿಎಸ್‍ಎ ಜಿಲ್ಲಾಧ್ಯಕ್ಷ, ಡಿವೈಎಸ್‍ಪಿಎಸ್‍ಬಿ ಎಂ. ಸುನೀಲ್‍ಕುಮಾರ್, ಡಿಸಿಬಿ ಡಿವೈಎಸ್‍ಪಿ ಉತ್ತಮ್ ದಾಸ್, ಎಸ್‍ಎಂಎಸ್ ಡಿವೈಎಸ್‍ಪಿ ಸಿ.ಕೆ. ಸುನೀಲ್ ಕುಮಾರ್, ಬೇಕಲ ಡಿವೈಎಸ್ಪಿ ಮನೋಜ್ ವಿ.ವಿ, ಅಪರಾಧ ವಿಭಾಗದ ಡಿವೈಎಸ್ಪಿ ಮಧುಸೂದನನ್ ನಾಯರ್, ಎನ್‍ಸಿ ಡಿವೈಎಸ್ಪಿ ಅನಿಲ್ ಕುಮಾರ್, ಕೆಪಿಒಎ ಜಿಲ್ಲಾ ಕಾರ್ಯದರ್ಶಿ ಪಿ.ರವೀಂದ್ರನ್, ಕೆಪಿಎ ಜಿಲ್ಲಾ ಕಾರ್ಯದರ್ಶಿ ಸುಧೀಶ್ ಪಿ.ವಿ, ಕೆಪಿಎಚ್‍ಸಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರದೀಪನ್ ಇ.ವಿ. ಉಪಸ್ಥಿತರಿದ್ದರು.
ಸಂಘಟನೆ ಉಪಾಧ್ಯಕ್ಷ ಸುರೇಶ್ ಕುಮಾರ್ ಎ.ಪಿ. ಸ್ವಾಗತಿಸಿದರು. ಕಾರ್ಯದರ್ಶಿ ವಿನೀತ್ ವರದಿ ಮಂಡಿಸಿದರು. ಜಿಲ್ಲಾ ಪೆÇಲೀಸ್ ಸಹಕಾರಿ ಸಂಘದ ಆಡಳಿತ ಸಮಿತಿ ಅಧ್ಯಕ್ಷೆ ಸಜಿತಾ ವಂದಿಸಿದರು.




