ಕಾಸರಗೋಡು: ಹದಿನಾಲ್ಕರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಸಕ್ತ ಮೇಲ್ಪರಂಬ ಕಳನಾಡು ಕಟ್ಟೆಕ್ಕಾಲ್‍ನಲ್ಲಿ ಗೂಡಂಗಡಿ ನಡೆಸುವ ಮಹಮ್ಮದ್ ಮುನೀರ್(24)ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಈತ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಗ್ರಾಲಿನಲ್ಲಿ ಗೂಡಂಗಡಿ ನಡೆಸುತ್ತಿದ್ದ ಸಂದರ್ಭ ಅಂಗಡಿಗೆ ಆಗಮಿಸಿದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು. ಇನ್ಸ್‍ಪೆಕ್ಟರ್ ಟಿ.ಕೆ ಮುಕುಂದನ್ ನೇತೃತ್ವದ ಪೊಲೀಸರರ ತಂಡ ಈತನನ್ನು ಬಂಧಿಸಿದೆ.




