HEALTH TIPS

ಕೊಟ್ಟಕ್ಕಲ್ ಆರ್ಯ ವೈದ್ಯಶಾಲೆಯ ಸಂಯೋಜನೆಯೊಂದಿಗೆ ಬೇಕಲ್ ಗೇಟ್‍ವೇ ರೆಸಾರ್ಟ್‍ನಲ್ಲಿ ವೆಲ್‍ನೆಸ್ ಸೆಂಟರ್ ಕಾರ್ಯಾರಂಭ

ಕಾಸರಗೋಡು: ಭಾರತದ ಆಯುರ್ವೇದವನ್ನು ಜಾಗತಿಕವಾಗಿ ಪ್ರಸಿದ್ಧಿಗೊಳಿಸಿದ ವೈದ್ಯ ರತ್ನಂ ಪಿ.ಎಸ್. ವಾರಿಯರ್ ಅವರ ಸಂಸ್ಥೆಯಾದ ಕೊಟ್ಟಕ್ಕಲ್ ಆರ್ಯ ವೈದ್ಯಶಾಲೆಯ ಸಹಯೋಗದೊಂದಿಗೆ ಬೇಕಲ್ ಗೇಟ್‍ವೇ ರೆಸಾರ್ಟ್‍ನಲ್ಲಿ ವೆಲ್‍ನೆಸ್ ಸೆಂಟರ್ ಆರಂಭಗೊಳ್ಳಲಿರುವುದಾಗಿ ಸೆಂಟರ್‍ನ ಪ್ರಧಾನ ವ್ಯವಸ್ಥಾಪಕರು, ಜೆ. ಗೋಪಾಲಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

123 ವರ್ಷಗಳ ಸೇವಾ ಪರಂಪರೆಯನ್ನು ಹೊಂದಿರುವ ಆರ್ಯ ವೈದ್ಯಶಾಲೆ ಆಯುರ್ವೇದ ಚಿಕಿತ್ಸಾ ರಂಗದ ತನ್ನ ಅನುಭವವನ್ನು ಬೇಕಲ್‍ನಲ್ಲಿರುವ ಪ್ರೀಮಿಯಂ ಐಷಾರಾಮಿ ರೆಸಾರ್ಟ್ ಆಗಿರುವ ಗೇಟ್‍ವೇ ಮೂಲಕ ಧಾರೆಯೆರೆಯಲಿದೆ. ದೇಶದ ನಾನಾ ಕಡೆಯಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಇದು ಪ್ರಯೋಜನಕಾರಿಯಾಗಲಿದೆ. ಆರ್ಯ ವೈದ್ಯಶಾಲೆಯ ಶುದ್ಧ ಆಯುರ್ವೇದ ಚಿಕಿತ್ಸೆಗಳು ಮತ್ತು ಗೇಟ್‍ವೇ ಬೇಕಲ್‍ನ ಪ್ರಮುಖ ಆತಿಥ್ಯದ ಸಂಯೋಜನೆಯು ಬೇಕಲ್ ಆರೋಗ್ಯ ಪ್ರವಾಸೋದ್ಯಮಕ್ಕೆ ಹೊಸ ಆಯಾಂ ತಂದುಕೊಡಲಿದೆ. ಮಂಗಳೂರು ಮತ್ತು ಕಣ್ಣೂರು ವಿಮಾನ ನಿಲ್ದಾಣಗಳ ಮೂಲಕ ಬರುವ ಸಂದರ್ಶಕರ ಅನುಕೂಲತೆ ಮತ್ತು ಇತರ ಸಾರಿಗೆ ಸೌಲಭ್ಯಗಳೊಂದಿಗೆ ಆಧುನಿಕ ಸ್ವಾಸ್ಥ್ಯ ಅಗತ್ಯಗಳನ್ನು ಸಂಯೋಜಿಸಲಾಗುತ್ತದೆ. 

ಈ ಉಪಕ್ರಮವು ಬರುವವರಿಗೂ ಅಷ್ಟೇ ಅನುಕೂಲಕರವಾಗಿರುತ್ತದೆ ಎಂದು ಕೊಟ್ಟಕ್ಕಲ್ ಆರ್ಯ ವೈದ್ಯಶಾಲೆಯ ಉಪ ವೈದ್ಯಕೀಯ ಅಧಿಕಾರಿ ಡಾ. ಸಿಂಜಿತ್ ಹೇಳಿದರು. ಗೇಟ್‍ವೇ ಬೇಕಲ್, ಕೇರಳದ ಪ್ರಮುಖ ರೆಸಾರ್ಟ್‍ಗಳಲ್ಲಿ ಒಂದಾಗಿದೆ. ಅನುಭವಿ ವೈದ್ಯರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಶುಶ್ರೂಷಕರ ಮೂಲಕ ಆಯುರ್ವೇದ ಚಿಕಿತ್ಸೆ ಲಭ್ಯವಿರಲಿದೆ. 

ಗೇಟ್‍ವೇ ಭಾರತೀಯ ಅರೋಮಾಥೆರಪಿ ಮತ್ತು ಕೊಟ್ಟಕ್ಕಲ್ ಆರ್ಯ ವೈದ್ಯಶಾಲೆಯ ಆಯುರ್ವೇದ ಚಿಕಿತ್ಸೆಯೊಂದಿಗೆ ಸಂಯೋಜಿಸಿಕೊಂಡಿದ್ದು, ಗೇಟ್‍ವೇ ಬೇಕಲ್ ಕೇರಳದ ಅತ್ಯುತ್ತಮ ಆಯುರ್ವೇದ ಹಬ್ ಆಗಿ ಬದಲಾಗಿದೆ ಎಂದು ತಿಳಿಸಿದರು. 

ಸುದ್ದಿಗೊಷ್ಟಿಯಲ್ಲಿ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆ ಉಪ ವೈದ್ಯಾಧಿಕಾರಿ ಡಾ. ಸಿಂಜಿತ್ ಕೆ.ಪಿ,ವಿಕ್ರಮರಾಜ್. ಸಿ.ಪಿ. ಉಪಸ್ಥಿತರಿದ್ದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries