ಕುಂಬಳೆ: ಬಸ್ ಪ್ರಯಾಣದ ಮಧ್ಯೆ ಕಳೆದುಹೋಗಿದ್ದ ವಿದ್ಯಾರ್ಥಿನಿಯೊಬ್ಬಳ ಚಿನ್ನದ ಬ್ರೇಸ್‍ಲೆಟನ್ನು ಬಸ್ ಸಿಬ್ಬಂದಿ ವಾಪಾಸುಮಾಡುವ ಮುಲಕಪ್ರಮಾಣಿಕತೆ ಮೆರೆದಿದ್ದಾರೆ. ಕುಂಬಳೆ-ಧರ್ಮತ್ತಡ್ಕ ಮಧ್ಯೆ ಸಂಚರಿಸುವ ಖಾಸಗಿ ಬಸ್‍ನಲ್ಲಿ ಕುಂಬಳೆಯಿಂದ ಪ್ರಯಾಣಿಸಿದ್ದ ಪ್ಲಸ್‍ಟು ವಿದ್ಯಾರ್ಥಿನಿ ಅಲೀಮತ್ ಶಮ್ನಾ ಅವರ ಚಿನ್ನದ ಬ್ರೇಸ್‍ಲೆಟ್ ನಾಪತ್ತೆಯಾಗಿತ್ತು. ನಾಯ್ಕಾಪಿನಲ್ಲಿಬಸ್ಸಿಳಿದು ಅಲ್ಪ ದೂರ ತೆರಳಿದಾಗ ಕೈಯಲ್ಲಿದ್ದ ಬ್ರೇಸ್‍ಲೆಟ್ ನಾಪತ್ತೆಯಾಗಿರುವುದು ಗಮನಕ್ಕೆಬಂದಿತ್ತು. ಈ ಮಧ್ಯೆ ಬಸ್ ಸಿಬ್ಬಂದಿ ತಮ್ಮ ಬಸ್ಸಿನೊಳಗೆ ಬಿದ್ದು ಸಿಕ್ಕಿದ್ದ ಚಿನ್ನದ ಬ್ರೇಸ್‍ಲೆಟ್ ಬಗ್ಗೆ ವಾಟ್ಸಪಲ್ಲಿ ಸಂದೇಶ ರವಾನಿಸಿದ್ದರು. ತಕ್ಷಣ ವಿದ್ಯಾರ್ಥಿನಿ ಕುಂಬಳೆಗೆ ತೆರಳಿ, ನಾಪತ್ತೆಯಾಗಿದ್ದ ತನ್ನ ಚಿನ್ನವನ್ನು ಖಚಿತಪಡಿಸಿಕೊಂಡಿದ್ದಳು. ಕುಂಬಳೆ ಠಾಣೆಯಲ್ಲಿ ಪೊಲೀಸರ ಉಪಸ್ಥಿತಿಯಲ್ಲಿ ಬಸ್ ಸಿಬ್ಬಂದಿ ಧರ್ಮತ್ತಡ್ಕ ಬಾಳಿಗ ನಿವಾಸಿ ಸೋಮನಾಥ ಹಾಗೂ ಮುಗು ನಿವಾಸಿ ಆಶಿಕ್ ಅವರು ವಿದ್ಯಾರ್ಥಿನಿಗೆ ಚಿನ್ನ ಹಸ್ತಾಂತರಿಸಿದ್ದಾರೆ. ಇಂದಿನ ಧಾರಣೆಯನ್ವಯ ಚಿನ್ನದ ಬ್ರೇಸ್‍ಲೆಟ್ ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯ ಹೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಸ್ಸಿನ ಇದೇ ಸಇಬ್ಬಂದಿಗೆ ವರ್ಷದ ಹಿಂದೆ 2ಲಕ್ಷ ರೂ. ನಗದು ಲಭಿಸಿದ್ದು, ಈಮೊತ್ತವನ್ನೂ ವಾರಸುದಾರರಿಗೆ ಹಸ್ತಾಂತರಿಸಿದ್ದರು. ಬಸ್ ಪ್ರಯಾಣದ ಮಧ್ಯೆ ನಗದು, ಚಿನ್ನ ಸೇರಿದಂತೆ ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ನಿಗಾ ಇರಿಸಿಕೊಳ್ಳುವಂತೆ ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಟಿ.ಕೆಮುಕುಂದನ್ ಮಾಹಿತಿ ನೀಡಿದ್ದಾರೆ.




