ಕಾಸರಗೋಡು : ಕನ್ನಡ ಗ್ರಾಮದಲ್ಲಿ ನವೆಂಬರ್ 4 ರಂದು ಜರುಗಲಿರುವ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ಹಾಗೂ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಶಿವರಾಮ ಕಾಸರಗೋಡು ಅವರ 60 ರ ಅಭಿನಂದನಾ ಸಮಾರಂಭದ ಪೂರ್ವಭಾವಿಯಾಗಿ ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಯನ್ ವೆಂಕಟ್ರಮಣ ಹೊಳ್ಳರ ನೇತೃತ್ವದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ನೆರವೇರಿತು.
ಸಮಾರಂಭದಲ್ಲಿ ಶಿವರಾಮ ಕಾಸರಗೋಡು, ಲವ ಮೀಪುಗುರಿ, ಕುಶಲ ಕುಮಾರ್, ಶ್ರೀಕಾಂತ ಕಾಸರಗೋಡು, ನಗರಸಭಾ ಮಾಜಿ ಸದಸ್ಯ ಶಂಕರ ಕೆ, ನಗರಸಭಾ ಸದಸ್ಯೆ ಶಾರದಾ , ಯೋಗಿಶ್ ಕೋಟೆಕಣಿ, ದಿವಾಕರ ಅಶೋಕ ನಗರ, ಪ್ರದೀಪ್ ಬೇಕಲ್, ಜಗದೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.
ನ. 4ರಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ, 'ಶಿವರಾಮ ಕಾಸರಗೋಡು-60' ಫೆÇೀಟೋ ಗ್ಯಾಲರಿ ಉದ್ಘಾಟನೆ, ಕಾಸರಗೋಡು ಕರ್ನಾಟಕದೊಂದಿಗೆ ವಿಲೀನೀಕರಣಕ್ಕಾಗಿ ಹೋರಾಡಿದ 60 ಮಂದಿ ಕನ್ನಡ ಸತ್ಯಾಗ್ರಹಿಗಳ, ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪ ನಮನ, ನುಡಿ ನಮನ ನಡೆಯಲಿದೆ. ಬೆಳಗ್ಗೆ 10ಕ್ಕೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮೋತ್ಸವವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷ ಡಾ. ಸಿ. ಸೋಮಶೇಖರ್(ಐಎಎಸ್)ಉದ್ಘಾಟಿಸಿ, ಸರ್ವಾಧ್ಯಕ್ಷತೆಯನ್ನು ವಹಿಸುವರು. ವಿವಿಧ ವಿಚಾರಗೋಷ್ಠಿ, ವಿಚಾರ ಸಂಕಿರಣ ನಡೆಯಲಿದೆ.
ಸಂಜೆ4ಕ್ಕೆ ಶಿವರಾಮ ಕಾಸರಗೋಡು 60 ನೇ ಜನ್ಮ ದಿನಾಚರಣೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಗೋ ಕುಟೀರಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಭೂಮಿ ಪೂಜೆ ನೆರವೇರಿಸುವರು. ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸುವರು.


