ಬದಿಯಡ್ಕ: ಕೇರಳ ಸೇರಿದಂತೆ ದೇಶದ ನಾನಾ ರಾಜ್ಯಗಳನ್ನು ಬಡತನ ಮುಕ್ತಗೊಳಿಸಲು ಉಚಿತ ಆಹಾರ ಪದಾರ್ಥ ಮತ್ತು ಆರೋಗ್ಯ ವಿಮಾ ಯೋಜನೆಗಳು ಸಹಕಾರಿಯಾಗಿದ್ದು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕೀರ್ತಿ ಸಂಪೂರ್ಣವಾಗಿ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರ, ವಕೀಲ ವಿ.ಪಿ. ಶ್ರೀಪದ್ಮನಾಭನ್ ಹೇಳಿದರು. ಅವರು ಬಿಜೆಪಿ ವತಿಯಿಂದ 'ಅಭಿವೃದ್ಧಿ ಹೊಂದಿದ ಬದಿಯಡ್ಕ' ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳದ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳ ನಿರ್ಮಾಣ, ಜಲ ಜೀವನ್ ಮಿಷನ್ ಕುಡಿಯುವ ನೀರು ಸರಬರಾಜು, ಉಚಿತ ವಿದ್ಯುತ್ ಸಂಪರ್ಕ, ಸೇರಿದಂತೆ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಭ್ರಷ್ಟಾಚಾರ, ನಿರುದ್ಯೋಗ, ಕೇಂದ್ರ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸರ್ಕಾರ ವಿಫಲವಾಗಿದ್ದು,ಆರ್ಥಿಕ ಸಂಕಷ್ಟದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಎಡರಂಗ ಸರ್ಕಾರ ಗಾಜಾದಂತಹ ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಎತ್ತುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಬದಿಯಡ್ಕ ಪಂಚಾಯತ್ ಚುನಾವಣಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 'ಅಭಿವೃದ್ಧಿ ಹೊಂದಿದ ಕೇರಳ-ಅಭಿವೃದ್ಧಿ ಹೊಂದಿದ ಪಂಚಾಯಿತಿ'ಪ್ರತಿಜ್ಞೆಯನ್ನು ಬೋಧಿಸಲಯಿತು.. ಬಿಜೆಪಿ ರಾಜ್ಯ ಕೋಶ ಸಂಯೋಜಕ ವಿ.ಕೆ. ಸಜೀವನ್, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಮಂಡಲ ಉಪಾಧ್ಯಕ್ಷೆ ಜಯಂತಿ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಅಶ್ವಿನಿ ಕೆ.ಎಂ., ಮಹಿಳಾ ಮೋರ್ಚಾ ಮಂಡಲ ಸಮಿತಿ ಅಧ್ಯಕ್ಷೆ ಪ್ರೇಮಾ ಕುಮಾರಿ, ಬದಿಯಡ್ಕ ಪಂಚಾಯಿತಿ ಪಶ್ಚಿಮ ಕ್ಷೇತ್ರ ಸಮಿತಿ ಅಧ್ಯಕ್ಷ ಮಹೇಶ್ ವಳಕುಂಜ, ಪೂರ್ವ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಆನಂದ ಕೆ ಉಪಸ್ಥಿತರಿದ್ದರು.





