ಕಾಸರಗೋಡು: ಎಸ್‍ಐಆರ್ ಫಾರ್ಮ್‍ಗಳ ವಿತರಣೆಗೆ ಸಂಬಂಧಿಸಿದ ವಿವಾದದಲ್ಲಿ ಬೂತ್ ಮಟ್ಟದ ಅಧಿಕಾರಿ(ಬಿ.ಎಲ್.ಒ.)ಯ ಮೇಲೆ ಹಲ್ಲೆ ನಡೆಸಿದ ಸಿಪಿಎಂ ಪಂಚಾಯತ್ ಸದಸ್ಯನ ಬಂಧನಕ್ಕೆ ನ್ಯಾಯಾಲಯ ಆದೇಶಿಸಿದೆ.
ಬಂದಡ್ಕ ಬಿವೇರೇಜಸ್ ಔಟ್‍ಲೆಟ್‍ನಲ್ಲಿ ಗುಮಾಸ್ತರಾಗಿರುವ ಬಿಎಲ್‍ಒ ಪಿ. ಅಜಿತ್ ಅವರ ಮೇಲೆ ಹಲ್ಲೆ ನಡೆಸಿ ನಿಂದಿಸಲಾಗಿತ್ತು. ಆರೋಪಿ ದೇಲಂಪಾಡಿ ಪಂಚಾಯತ್ ಕಲ್ಯಾಣ ಸಮಿತಿಯ ಅಧ್ಯಕ್ಷ ಸುರೇಂದ್ರನ್.
ಗುರುವಾರ ಬೆಳಿಗ್ಗೆ ಪಯರಡ್ಕದಲ್ಲಿ ನಡೆಯುತ್ತಿದ್ದ ಎಸ್,ಆರ್.ಐ. ಶಿಬಿರದಲ್ಲಿ ಈ ಘಟನೆ ನಡೆದಿದೆ. ಸುರೇಂದ್ರನ್ ಅಜಿತ್ ಅವರನ್ನು ನಿಂದಿಸುತ್ತಿರುವ ದೃಶ್ಯಗಳು ಬೆಳಕಿಗೆ ಬಂದಿವೆ. ಬಿಎಲ್‍ಒ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸುತ್ತಿದೆ.




