ಉಪ್ಪಳ: ಕುಡಾಲು ಮೇರ್ಕಳ ಗ್ರಾಮದ ಪೆರಿಯಪ್ಪಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಬಲಿವಾಡು ಕೂಟದೊಂದಿಗೆ ಬುಧವಾರ ನೆರವೇರಿತು. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಜರಗಿದವು. ವೇದಮೂರ್ತಿ ರವಿಕುಮಾರ ಭಟ್ ಕಡುಮನೆ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಭಕ್ತಾದಿಗಳಿಂದ ಭಜನೆ, ಗಣಪತಿ ಹೋಮ, ಶ್ರೀ ದೇವರಿಗೆ ರುದ್ರಾಭಿಷೇಕ, ನಾಗ ದೇವರಿಗೆ ಪೂಜೆ, ವಿವಿಧ ದೈವಗಳಿಗೆ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.





