ಕಾಸರಗೋಡು: ದೆಹಲಿ ಕೆಂಪುಕೋಟೆ ಬಳಿ ಕಾರು ಬಾಂಬು ಸ್ಪೋಟದ ಉಗ್ರಗಾಮಿ ಕೃತ್ಯದ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಜಾಗ್ರತೆ ಪಾಲಿಸಿದ್ದಾರೆ. ಕೆಂಪುಕೋಟೆಯಲ್ಲಿ ನಡೆದಿರುವುದು ವ್ಯವಸ್ಥಿತ ಉಗ್ರಗಾಮಿ ಕೃತ್ಯವೆಂದು ಸಾಬೀತಾದ ಬೆನ್ನಲ್ಲೇ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಪೆÇಲೀಸ್ ಕಟ್ಟೆಚ್ಚರ ಮತ್ತು ತಪಾಸಣೆ ಮುಂದುವರಿದಿದೆ.
ಕಾಸರಗೋಡಿನ ಗಡಿ ಭಾಗಗಳಲ್ಲಿ ರಾತ್ರಿ ವೇಳೆ ವಿಶೇಷ ವಾಹನ ತಪಾಸಣೆ ನಡೆಸಲಾಗುತ್ತಿದೆ. ಕಾಸರಗೋಡು, ಕಾಞಂಗಾಡು ರೈಲು ನಿಲ್ದಾಣಗಳಲ್ಲಿ ಬಾಂಬ್ ಸ್ಕ್ವಾಡ್ ಕಟ್ಟೆಚ್ಚರದ ತಪಾಸಣೆ ನಡೆಸುತ್ತಿದೆ. ಪೊಲೀಸ್ ಕಾರ್ಯಾಚರಣೆ ಬಗ್ಗೆ ಮಾಧ್ಯಮದ ದೃಶ್ಯ ಚಿತ್ರೀಕರಣಕ್ಕೆ ಪೊಲೀಸರು ಆಸ್ಪದ ನೀಡದೆ, ರಕ್ಷಣಾ ದೃಷ್ಟಿಯಲ್ಲಿ ದೃಶ್ಯ ದಾಖಲೀಕರಣ ಮಾಡುವಂತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




