ಕಾಸರಗೋಡು: ನೆದರ್‍ಲ್ಯಾಂಡ್‍ಗೆ ವಿಸಾ ದೊರಕಿಸಿಕೊಡುವ ಭರವಸೆಯೊಂದಿಗೆ ಏಳು ಲಕ್ಷ ರಊ. ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನೀಲೇಶ್ವರ ಚಿರಪ್ಪುಂ ನಿವಾಸಿ ಉಲ್ಲಾಸ್(40)ಎಂಬಾತನನ್ನು ಚಿತ್ತಾರಿಕ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚನೆ ನಡೆಸಿದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಈತ ಊರಿಗೆ ವಾಪಸಾಗುತ್ತಿದ್ದಂತೆ ಬೆಂಗಳೂರು ವಿಮಾನ ನಿಲ್ದಾಣದಿಂದ ಈತನನ್ನು ಬಂಧಿಸಲಾಗಿದೆ.
ವೆಸ್ಟ್‍ಎಳೇರಿ ಮಂಗತ್ ನಿವಾಸಿ ಸಜೀವನ್ ಎಂಬವರ ದೂರಿನ ಮೇರೆಗೆ ಈತನನ್ನು ಬಂಧಿಸಲಾಗಿದೆ. ನೆದರ್‍ಲ್ಯಾಂಡ್‍ನಲ್ಲಿ ಉದ್ಯೋಗಕ್ಕಾಗಿ ವಿಸಾ ದೊರಕಿಸಿಕೊಡುವುದಾಗಿ 2023 ಸೆ. 23 ಹಾಗೂ 2025 ಸೆ. 10ರ ಮಧ್ಯೆ ಸಜೀವನ್ ಅವರಿಂದ ಏಳು ಲಕ್ಷ ರೂ. ಹಣ ಪಡೆದು ವಿಸಾ ನೀಡದೆ, ಹಣವನ್ನೂ ವಾಪಾಸು ಮಾಡದೆ ವಂಚಿಸಿರುವ ಬಗ್ಗೆ ಈತನ ವಿರುದ್ಧ ಕೇಸು ದಾಖಲಾಗಿತ್ತು. ವಿಸಾ ನೀಡುವುದಾಗಿ ಹಲವರಿಂದ ಹಣಪಡೆದು ವಂಚಿಸಿರುವ ಬಗ್ಗೆ ಈತನ ವಿರುದ್ಧ ಇನ್ನೂ ಕೆಲವೊಂದು ಕೇಸು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




