ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘ(ಕೆಎಸ್‍ಪಿಎಸ್)ಕಾಸರಗೋಡು ಬ್ಲಾಕ್ ಸಮಿತಿ ಸಮ್ಮೇಳನ ಕೂಡ್ಲು ರಾಮದಾಸ್ ನಗರದ ರಾಷ್ಟ್ರೀಯ ಅಧ್ಯಾಪಕ ಪರಿಷತ್ ಸಭಾಂಗಣದಲ್ಲಿ ಜರುಗಿತು. ಬ್ಲಾಕ್ ಸಮಿತಿ ಅಧ್ಯಕ್ಷ ಎಂ. ನಾರಾಯಣ ಧ್ವಜಾರೋಹಣ ನಡೆಸಿದರು. ಪೆನ್ಷನರ್ಸ್ ಸಂಘದ ಕಾಸರಗೋಡು ಜಿಲ್ಲಾ ಅಧ್ಯಕ್ಷ ಬಿ.ನಾಗರಾಜ ಸಮ್ಮೇಳನ ಉದ್ಘಾಟಿಸಿದರು.
ಆರೆಸ್ಸೆಸ್ ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ನಾಯರ್ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ, ಸೇವೆಯಿಂದ ನಿವೃತ್ತರಾಗುವವರು ಸಮಾಜ ಸುಧಾರಣಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸದೃಢ ಸಮಾಜದ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು.
ಎನ್‍ಜಿಓ ಸಂಘ ಜಿಲ್ಲಾ ಕಾರ್ಯದರ್ಶಿ ರಾಜೇಶ್, ಬಿಎಂಎಸ್ ಜತೆಕಾರ್ಯದರ್ಶಿ ಗುರುದಸ್, ಕೆಎಸ್‍ಪಿಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ. ಮುತ್ತುಕೃಷ್ಣನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ. ಈಶ್ವರ ರಾವ್ ಉಪಸ್ಥಿತರಿದ್ದರು. ಬಲರಾಮ ಭಟ್ ಮಧೂರು ವರದಿ, ಎಂ.ನಾರಾಯಣ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನಾರಾಯಣಯ್ಯ ಮಧೂರು, ಮಾಧವ ಹೇರಳ ಹಾಗೂ ಸವಿತಾ ಟೀಚರ್ ಗೌರವಾಧ್ಯಕ್ಷರು, ಸೂರ್ಯನಾರಾಐಣ ಭಟ್ ಎಂ. ಅಧ್ಯಕ್ಷ, ಗಂಗಾಧರ ಎಂ ಉಪಾಧ್ಯಕ್ಷ, ರಾಜೇಂದ್ರ ಕುಂಟಾರು ಕಾರ್ಯದರ್ಶಿ, ವಂದನಾಟೀಚರ್ ಜತೆಕಾರ್ಯದರ್ಶಿ ಹಾಗೂ ಎಂ. ಸೀತಾರಾಮ ಭಟ್ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.
ಬ್ಲಾಕ್ ಕಾರ್ಯದರ್ಶಿ ಬಲರಾಮ ಭಟ್ ಮಧೂರು ಸ್ವಾಗತಿಸಿದರು. ಶಶಿಧರ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ನೂತನಾ ಕುಮಾರಿ ವಂದಿಸಿದರು.




