ಕಾಸರಗೋಡು: ಅಖಂಡ ಭಾರತದ ಶಿಲ್ಪಿ ಮತ್ತು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ 41 ನೇ ಹುತಾತ್ಮ ದಿನಾಚರಣೆಯಂದು, ಎನ್‍ಜಿಓ ಅಸೋಸಿಯೇಷನ್ ಕಾಸರಗೋಡು ಶಾಖಾ ಸಮಿತಿಯ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸಿ, ಸಂಸ್ಮರಣಾ ಸಮಾರಂಭ ಆಯೋಜಿಸಲಾಯಿತು. ಕೇರಳ ಎನ್‍ಜಿಒ ಅಸೋಸಿಯೇಷನ್‍ನ ರಾಜ್ಯ ಸಮಿತಿ ಕಾರ್ಯದರ್ಶಿ ಸದಸ್ಯ ಸುರೇಶ್ ಪೆರಿಯಂಗಾನಂ ಇಂದಿರಾಜಿ ಸ್ಮರಣಾರ್ಥ ಉಪನ್ಯಾಸ ನೀಡಿದರು.
ಶಾಖೆಯ ಅಧ್ಯಕ್ಷ ಶ್ರೀನಿಮೋನ್.ಎಂ.ಕೆ. ಅಧ್ಯಕ್ಷತೆ ವಹಿಸಿದ್ದರು.ವಿ.ಟಿ.ಪಿ.ರಾಜೇಶ್, ಪಿ.ಕುಂಜಿಕೃಷ್ಣನ್, ಎ.ರತೀಶ್ ಕುಮಾರ್, ರತಿ.ವಿ, ಶಜಿಲ್, ಗೋಪಕುಮಾರ್ ಉಪಸ್ಥಿತರಿದ್ದರು.
ಶ್ರೀಲೇಶ್, ರಾಘವನ್ ಅಡ್ಕ, ಟಿ.ಕುಂಜಿಕಣ್ಣನ್, ಜಗದೀಸನ್.ಸಿಎಚ್, ಅನಿತಾ, ಶಾಹಿಲ್.ಸಿಪಿ, ಬಾಲಚಂದ್ರನ್, ಬಿಂದು. ವಿ.ವಿ, ಉಷಾ ಸುರೇಶ್, ರಾಮಕೃಷ್ಣನ್.ಕೆ, ವಿನೋದ್ ಕುಮಾರ್, ಜ್ಯೋತಿ, ವಿನಯ್, ರಮೇಶ್ ಮೋಹನ್, ಶಮಿ ಮತ್ತು ಮನೋಜ್ ಕುಮಾರ್ ನೇತೃತ್ವ ವಹಿಸಿದ್ದರು.





