ಕಾಸರಗೋಡು: ವಿದ್ಯಾನಗರದ ಪ್ರಿನ್ಸ್ ಮೈದಾನದಲ್ಲಿ ಕಾಸರಗೋಡು ಉತ್ಸವ ಶುಕ್ರವಾರ ಆರಂಭಗೊಂಡಿತು. ಮಧ್ಯಾಹ್ನ 2ರಿಂದ ರಾತ್ರಿ 9.30ರ ವರೆಗೆ ಫೆಸ್ಟ್ ನಡೆಯಲಿದ್ದು, ಮನರಂಜನೆಯ ಜೊತೆಗೆ, ಗೃಹೋಪಯೋಗಿ ಉತ್ಪನ್ನಗಳ ಶಾಪಿಂಗ್, ಆಹಾರ ಮೇಳ, ರಾಜಸ್ಥಾನಿ ಉತ್ಪನ್ನಗಳು, ಉತ್ತರ ಭಾರತೀಯ ಉತ್ಪನ್ನಗಳು, ಪೀಠೋಪಕರಣಗಳ ಮಾರಾಟ ಸ್ಟಾಲ್‍ಗಳು ಮೇಳದಲ್ಲಿದ್ದು, ವೈವಿಧ್ಯಮಯ ಉತ್ಪನ್ನಗಳು ಲಭ್ಯವಿರಲಿದೆ ಎಂದು ಮುಖ್ಯ ಸಂಯೋಜಕ ಅರ್ಜುನನ್ ತಾಯಲಂಗಾಡಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಉತ್ಸವದಲ್ಲಿ ಮಾರುತಿ ಕಾರ್ ಸರ್ಕಸ್ ಮತ್ತು ರೊಬೊಟಿಕ್ ಶ್ವಾನಗಳು, ಚೀನಾ ಮತ್ತು ದುಬೈನಲ್ಲಿ ಸಂಚಲನ ಮೂಡಿಸಿರುವ ವಿಶ್ವವಿಖ್ಯಾತ ಸರ್ರಿಯಲ್ ಜಲಪಾತವನ್ನು ವಿಶೇಷ ತಂತ್ರಗಳ ಮೂಲಕ ಇಲ್ಲಿ ಮರುಸೃಷ್ಟಿಸಲಾಗಿದೆ. ಜತೆಗೆ ಡಿಜೆ ಅಮ್ಯೂಸ್‍ಮೆಂಟ್ಸ್, ಮನೋರಂಜನಾ ಉದ್ಯಾನವನ, ಕುಟುಂಬ ಆಟಗಳು ಮತ್ತು ಮಕ್ಕಳ ಆಟದ ಮೈದಾನ ಒಳಗೊಮಡಿದೆ ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ವ್ಯವಸ್ಥಾಪಕರಾದ ಬೆನ್ನಿ ಮತ್ತು ಜಾರ್ಜ್ ಉಪಸ್ಥಿತರಿದ್ದರು.




